×
Ad

ಉಡುಪಿ: ರೂಫ್‌ಟಾಪ್ ಸೋಲಾರ್‌ನಿಂದ ವಿದ್ಯುತ್‌ನಲ್ಲಿ ಭಾರೀ ಉಳಿತಾಯ

Update: 2018-06-29 22:40 IST

ಉಡುಪಿ, ಜೂ.29: ಮನೆಗಳಿಗೆ, ಉದ್ಯಮಗಳಲ್ಲಿ ರೂಫ್‌ಟಾಪ್ ಸೋಲಾರ್ ಸಿಸ್ಟಮ್‌ಗಳನ್ನು ಬಳಸುವುದರಿಂದ ವಾರ್ಷಿಕ ವಿದ್ಯುತ್ ಬಿಲ್‌ನಲ್ಲಿ ಭಾರೀ ಉಳಿತಾಯವಾಗುತ್ತದೆ ಎಂದು ಕೋಟದ ಜನತಾ ಫಿಶ್‌ಮಿಲ್ ಎಂಡ್ ಆಯಿಲ್ ಪ್ರಾಡಕ್ಟ್‌ನ ವ್ಯವಸ್ಥಾಪಕ ಪಾಲುದಾರ ಪ್ರಶಾಂತ್ ಕುಂದರ್ ಹೇಳಿದ್ದಾರೆ.

ಉಡುಪಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರಾವಳಿಯ ಪ್ರಮುಖ ಫಿಶ್‌ಮಿಲ್‌ಗಳಲ್ಲಿ ಒಂದಾದ ಜನತಾ ಫಿಶ್‌ಮಿಲ್‌ನ ಪ್ರಶಾಂತ್, ತಮ್ಮ ಸಂಸ್ಥೆಯಲ್ಲಿ ಒಟ್ಟು ಒಂದು ಮೆಗಾವ್ಯಾಟ್ ಸಾಮರ್ಥ್ಯದ ಸೌರ ಮೇಲ್ಚಾವಣಿಯನ್ನು ಅಳವಿಡಿಸಿದ್ದು, ಇದರಿಂದ ಪ್ರತಿ ವರ್ಷ ಅಂದಾಜು ಒಂದು ಕೋಟಿ ರೂ.ಗೂ ಅಧಿಕ ಉಳಿತಾಯ ಮಾಡಲು ಸಾದ್ಯವಾಗುತ್ತಿದೆ ಎಂದರು.

2015ರಲ್ಲಿ ಅರ್ಬ್ ಎನರ್ಜಿ 100ಕಿ.ವ್ಯಾಟ್‌ನ ಸೌರ ಮೇಲ್ಚಾವಣಿಯನ್ನು ಅಳವಡಿಸಿತ್ತು. ಇದರ ಯಶಸ್ಸಿನಿಂದ ಉತ್ತೇಜಿತರಾಗಿ 2016ರಲ್ಲಿ ಮತ್ತೆ 400 ಕಿ.ವ್ಯಾಟ್ ಸೌರ ಮೇಲ್ಚಾವಣಿಯನ್ನು ಅಳವಡಿಸಲಾಯಿತು. ಈಗ ಮತ್ತೂ 500 ಕಿ.ವ್ಯಾಟ್‌ನ ರೂಫ್‌ಟಾಪ್ ಸೋಲಾರ್‌ವ್ಯಾಟ್ ಅಳವಡಿಸಿ ವರ್ಷಕ್ಕೆ ಒಂದು ಕೋಟಿ ರೂ.ಗಳಿಗೂ ಅಧಿಕ ಉಳಿತಾಯ ಮಾಡಲು ಸಾಧ್ಯವಾಗುತ್ತಿದೆ ಎಂದವರು ತಿಳಿಸಿದರು.

ನಮ್ಮ ಪ್ಯಾಕ್ಟರಿಗೆ 2500 ಕಿ.ವ್ಯಾಟ್ ವಿದ್ಯುತ್ ಬೇಕಾಗುತ್ತದೆ.ಈಗ ಒಂದು ಸಾವಿರ ಕಿ.ವ್ಯಾಟ್‌ನ್ನು ಸೌರ ಮೇಲ್ಚಾವಣಿಯಿಂದ ಪಡೆಯುತಿದ್ದೇವೆ. ಇದರಿಂದ ನಮಗೆ ಭಾರೀ ಲಾಭವಾಗುತ್ತಿದೆ ಎಂದರು. ಮಹಾರಾಷ್ಟ್ರದ ರತ್ನಗಿರಿ, ತಮಿಳುನಾಡುಗಳಲ್ಲಿರುವ ನಮ್ಮ ಉಳಿದ ಪ್ಯಾಕ್ಟರಿಗಳಿಗೂ ಸೌರ ಮೇಲ್ಚಾವಣಿ ಅಳವಡಿಸುವ ಯೋಜನೆ ರೂಪಿಸಿದ್ದೇವೆ ಎಂದರು.

ಅರ್ಬ್ ಎನರ್ಜಿ ಸಂಸ್ಥೆ ನಮಗೆ ಭರವಸೆ ನೀಡಿದಂತೆ ಫಲಿತಾಂಶ ದೊರಕಿದೆ. ಅವರ ಸೇವೆಯೂ ಉತ್ತಮವಾಗಿದೆ. ಹೀಗಾಗಿ ಮೂರನೇ ಬಾರಿಯೂ ಅವರಿಂದಲೇ ಸೋಲಾರ್ ರೂಫ್‌ಟಾಪ್ ಅಳವಡಿಸಿಕೊಂಡಿದ್ದೇವೆ ಎಂದವರು ನುಡಿದರು.

ಎರ್ಬ್ ಎನರ್ಜಿ ಮಾರುಕಟ್ಟೆ ವಿಭಾಗದ ಉಪಾದ್ಯಕ್ಷ ಕಿರಣ್ ಮಾತನಾಡಿ, ಸಣ್ಣ ಮತ್ತು ಮಧ್ಯಮ ದರ್ಜೆ ಕೈಗಾರಿಕೆಗಳು ಸೋಲಾರ್ ರೂಫ್‌ಟಾಪ್ ಹೆಚ್ಚು ಹೆಚ್ಚು ಬಳಸಿದರೆ ದೇಶದ ವಿದ್ಯುತ್ ಸಮಸ್ಯೆ ಕಡಿಮೆಯಾಗುವುದು ಮಾತ್ರವಲ್ಲದೇ ಅವುಗಳ ಲಾಭಾಂಶವೂ ಅಧಿಕವಾಗುವುದು ಎಂದರು.

ತಮ್ಮ ಸಂಸ್ಥೆ ದೇಶಾದ್ಯಂತ ಈಗಾಗಲೇ 1,60,000ಕ್ಕೂ ಅಧಿಕ ಸೋಲಾರ್ ಸಿಸ್ಟಮ್‌ನ್ನು ಅಳವಡಿಸಿದೆ. ಕರ್ನಾಟಕದಲ್ಲಿ 40ಮೆಗಾವ್ಯಾಟ್ ಸಾಮರ್ಥ್ಯದ ಸೌರ ಮೇಲ್ಚಾವಣಿಗಳನ್ನು ಅವಡಿಸಿದ್ದೇವೆ. ಕರಾವಳಿ ಕರ್ನಾಟಕದಲ್ಲಿ ಈಗಾಗಲೇ 10 ಮೆಗಾವ್ಯಾಟ್‌ಗೂ ಅಧಿಕ ರೂಪ್‌ಟಾಪ್ ಸೋಲಾರ್ ಅಳವಡಿಸಲಾಗಿದೆ. ವಸತಿ, ಕೈಗಾರಿಕಾ ಸಂಸ್ಥೆಗಳಿಗೆ ಇದು ಹೇಳಿ ಮಾಡಿಸಿವೆ ಎಂದು ಕಿರಣ್ ನುಡಿದರು.

ಅರ್ಬ್ ಎನರ್ಜಿಯ ಯೋಜನಾ ವಿಭಾಗದ ಉಪಾಧ್ಯಕ್ಷ ಸುದೀಂದ್ರ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News