×
Ad

ಜು.1: ಕೆಥೊಲಿಕ್ ಸಭಾ ಉಡುಪಿ ವತಿಯಿಂದ ಸ್ವಚ್ಚ, ನಿರ್ಮಲ ಪರಿಸರ ಅಭಿಯಾನ

Update: 2018-06-29 22:50 IST

ಉಡುಪಿ, ಜೂ.29: ಕೆಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ವತಿ ಯಿಂದ ನಿರ್ಮಲ ಪರಿಸರ ನಮ್ಮ ಕರ್ತವ್ಯ ಎಂಬ ಧ್ಯೇಯವಾಕ್ಯದೊಂದಿಗೆ ಉಡುಪಿ ಧರ್ಮಪ್ರಾಂತ್ಯದ 50 ಕೆಥೊಲಿಕ್ ಸಭಾ ಘಟಕಗಳು, 5 ವಲಯ ಸಮಿತಿಗಳು ಹಾಗೂ ಸ್ಥಳೀಯ ಸಾಮಾಜಿಕ ಸಂಘಟನೆಗಳ ಮುಂದಾಳತ್ವದಲ್ಲಿ ಸ್ವಚ್ಚ ಹಾಗೂ ನಿರ್ಮಲ ಪರಿಸರ ಅಭಿಯಾನವನ್ನು ಜು.1ರಂದು ಆಯೋಜಿಸ ಲಾಗಿದೆ.

ಶಿರ್ವ ವಲಯದ ಶಂಕರಪುರ ಚರ್ಚಿನ ಆವರಣದಲ್ಲಿ ನಡೆಯುವ ಕಾರ್ಯ ಕ್ರಮಕ್ಕೆ ಕೆಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ಕೇಂದ್ರಿಯ ಆಧ್ಯಾತ್ಮಿಕ ನಿರ್ದೇಶಕ ವಂ.ಫರ್ಡಿನಾಂಡ್ ಗೊನ್ಸಾಲ್ವಿಸ್ ಮತ್ತು ಅಧ್ಯಕ್ಷ ಆಲ್ವಿನ್ ಕ್ವಾಡ್ರಸ್ ಹಾಗೂ ಇತರ ಪದಾಧಿಕಾರಿಗಳು ಅಧಿಕೃತ ಚಾಲನೆ ನೀಡಲಿರುವರು. ಈ ಅಭಿಯಾನದಲ್ಲಿ ಪರಿಸರ ರಕ್ಷಣೆ ಕುರಿತು ಮಾಹಿತಿ ಕಾರ್ಯಾಗಾರ, ಜಾಗೃತಿ ಶಿಬಿರ, ಸ್ವಚ್ಚತಾ ಕಾರ್ಯಕ್ರಮ, ಗಿಡಗಳ ವಿತರಣೆ ಹಾಗೂ ವನಮಹೋತ್ಸವ ಕಾರ್ಯಕ್ರಮಗಳು ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News