ಸ್ಕಾರ್ಪ್ ವಿವಾದ, ಆಡಳಿತ ಮಂಡಳಿ ಕ್ರಮ ಖಂಡನೀಯ: ಯುನಿವೆಫ್ ಕರ್ನಾಟಕ
Update: 2018-06-29 23:05 IST
ಮಂಗಳೂರು, ಜೂ. 29: ಇತ್ತೀಚೆಗೆ ನಗರದ ಸೈಂಟ್ ಆಗ್ನೆಸ್ ಕಾಲೇಜಿನಲ್ಲಿ ಸ್ಕಾರ್ಪ್ ಧರಿಸುವುದನ್ನು ವಿರೋಧಿಸುವುದರ ಮೂಲಕ ಮುಸ್ಲಿಮ್ ವಿದ್ಯಾರ್ಥಿನಿಯರ ಧಾರ್ಮಿಕ ಸ್ವಾತಂತ್ರ್ಯವನ್ನು ಮೊಟಕುಗೊಳಿಸುವ ಅಲ್ಲಿನ ಪ್ರಾಂಶುಪಾಲರು ಮತ್ತು ಆಡಳಿತ ಮಂಡಳಿಯ ನಿರ್ಧಾರ ಖಂಡನೀಯ ಎಂದು ಯುನಿವೆಫ್ ಕರ್ನಾಟಕ ತಿಳಿಸಿದೆ.
ಶತಮಾನಗಳಿಂದ ನಡೆದುಕೊಂಡು ಬಂದ ಧಾರ್ಮಿಕ ಸಂಪ್ರದಾಯಗಳನ್ನು ಹಾಗೇ ಮುಂದುವರಿಸಿಕೊಂಡು ಹೋಗಲು ಅನುಮತಿ ನೀಡಿ, ಸಂತ್ರಸ್ತ ವಿದ್ಯಾರ್ಥಿನಿಗಳನ್ನು ತರಗತಿಗೆ ಸೇರಿಸಿಕೊಂಡು ಈ ವಿವಾದಕ್ಕೆ ಶಾಂತಿಯುತ ಪರಿಹಾರ ನೀಡುವಂತೆ ಶಾಲಾಡಳಿತವನ್ನು ಯುನಿವೆಫ್ ಕರ್ನಾಟಕ ಒತ್ತಾಯಿಸುತ್ತದೆ ಮಾತ್ರವಲ್ಲ ಈ ವಿಷಯದಲ್ಲಿ ಇರುವ ತಪ್ಪು ಕಲ್ಪನೆಗಳನ್ನು ನೀಗಿಸುವ ನಿಟ್ಟಿನಲ್ಲೂ ಶಾಲಾಡಳಿತಕ್ಕೆ ಸಂಪೂರ್ಣ ಸಹಕಾರವನ್ನೂ ಅದು ನೀಡಬಯಸುತ್ತದೆ ಎಂದು ಯುನಿವೆಫ್ ಕರ್ನಾಟಕ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.