×
Ad

ಮಂಗಳೂರು: ಉದ್ಯೋಗ ಕೊಡಿಸುವುದಾಗಿ ವಂಚನೆ

Update: 2018-06-29 23:59 IST

ಮಂಗಳೂರು, ಜೂ.29: ವ್ಯಕ್ತಿಯೋರ್ವನಿಗೆ ಇಮೇಲ್ ಮಾಡಿ, ಉದ್ಯೋಗ ಕೊಡಿಸುವುದಾಗಿ ಬ್ಯಾಂಕ್ ಖಾತೆಯೊಂದಕ್ಕೆ ಹಣ ಹಾಕಿಸಿಕೊಂಡು ವಂಚಿಸಿದ ಬಗ್ಗೆ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಎಡ್ಮಂಡ್ ಹಿಲರಿ ಮಾರ್ಕೊ, ಅರಿಯಾಂಡ್ ಅಲಾನ್ ಎಂಬವರು ವಂಚಿಸಿದ ಆರೋಪಿಗಳು ಎಂದು ಗುರುತಿಸಲಾಗಿದೆ. ಶರತ್‌ಕುಮಾರ್ ಎಂಬವರೇ ವಂಚನೆಗೊಳಗಾದವರು.

ಮೇ 8ರಂದು ಶರತ್‌ಕುಮಾರ್ ಎಂಬವರಿಗೆ ಇಮೇಲ್‌ನಲ್ಲಿ ಕೆಲಸ ಬಗ್ಗೆ ಆಫರ್ ಬಂದಿದ್ದು, ಅದರಲ್ಲಿದ್ದ ಮೊಬೈಲ್ ನಂಬರ್‌ವೊಂದಕ್ಕೆ ಕರೆ ಮಾಡಿ ವಿಚಾರಿಸಿದ್ದಾರೆ. ಈ ವೇಳೆ ಆರೋಪಿಗಳು ಪಂಜಾಬ್ ನ್ಯಾಶನಲ್ ಬ್ಯಾಂಕ್ ಖಾತೆಯೊಂದಕ್ಕೆ ಹಣ ಹಾಕುವಂತೆ ತಿಳಿಸಿದ್ದಾರೆ. ಬಳಿಕ ಶರತ್‌ಕುಮಾರ್ ಮೇ 17ರಂದು ಅವರು ನೀಡಿದ ಖಾತೆಯ ನಂಬರ್‌ಗೆ 23,400 ರೂ. ಜಮೆ ಮಾಡಿ, ವಂಚನೆಗೊಳಗಾಗಿದ್ದಾರೆ ಎಂದು ತಿಳಿದುಬಂದಿದೆ.

ಈ ಕುರಿತು ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

29ಉಳ್ಳಾಲ9
  ಉಳ್ಳಾಲ: ಶಾಲೆಯ ಮುಖ್ಯ ಶಿಕ್ಷಕಿಯೊಬ್ಬರು ಶಾಲೆಯಲ್ಲಿ ನೀಡಿದ ಹೋಮ್‌ವರ್ಕ್ ಮಾಡಿಲ್ಲ ಎಂದು ಆರೋಪಿಸಿ 4ನೇ ತರಗತಿ ವಿದ್ಯಾರ್ಥಿನಿಗೆ ಹೊಡೆದಿದ್ದು, ಗಾಯಗೊಂಡಿರುವ ವಿದ್ಯಾರ್ಥಿನಿಯನ್ನು ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
   
 ಕಿನ್ಯ ಗ್ರಾಮದ ಅಜ್ಜಿನಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ 4ನೇ ತರಗತಿ ವಿದ್ಯಾರ್ಥಿನಿ ಹೊಡೆತ ತಿಂದು ಗಾಯಗೊಂಡಿರುವ ವಿದ್ಯಾರ್ಥಿನಿಯಾಗಿದ್ದಾಳೆ. ವಿದ್ಯಾರ್ಥಿನಿಯು ಶಾಲೆಯಲ್ಲಿ ನೀಡಿದ ಹೋಮ್‌ವರ್ಕ್ ಮಾಡಿಲ್ಲ ಎಂದು ಆರೋಪಿಸಿ ಶಾಲಾ ಮುಖ್ಯ ಶಿಕ್ಷಕಿ ಶಾರದಾ ಎಂಬುವವರು ವಿದ್ಯಾರ್ಥಿನಿಯ ಬೆನ್ನಿಗೆ ಮತ್ತು ಕೈಗೆ ಬೆತ್ತದಿಂದ ಹೊಡೆದಿದ್ದಾರೆ ಎನ್ನಲಾಗಿದೆ. ಶಿಕ್ಷಕಿಯ ಹೊಡೆತೆದಿಂದ ಗಾಯಗೊಂಡಿರುವ ವಿದ್ಯಾರ್ಥಿನಿಯ ತಂದೆ ಚೈಲ್ಡ್ ಲೈನ್‌ಗೆ ದೂರು ನೀಡಿದ್ದು, ಚೈಲ್ಡ್‌ಲೈನ್‌ನ ಅಧಿಕಾರಿಗಳು ಆಗಮಿಸಿ ವಿದ್ಯಾರ್ಥಿನಿಯಿಂದ ಮಾಹಿತಿ ಪಡೆದು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಫೋಟೋ: 29ಉಳ್ಳಾಲ10,11

ಸ್ಕಾರ್ಫ್ ವಿವಾದ ಮುಸ್ಲಿಮ್ ಮುಖಂಡರಿಂದ ತುರ್ತು ಸಭೆ

ಮಂಗಳೂರು:ಸೈಂಟ್ ಆಗ್ನೆಸ್ ಕಾಲೇಜಿನಲ್ಲಿ ಭುಗಿಲೆದ್ದ ಸ್ಕಾರ್ಫ್ ವಿವಾದ ಬಗೆಹರಿಸುವ ನಿಟ್ಟಿನಲ್ಲಿ ರಚಿಸಿದ ಮುಸ್ಲಿಂ ಮುಖಂಡರ ವೇದಿಕೆಯ ತುರ್ತು ಸಭೆಯು ಇಂದು ಸಂಜೆ ಬಂದರಿನ ಕಛೇರಿಯೊಂದರಲ್ಲಿ ನಡೆಯಿತು. ಕಾಲೇಜಿನ ಪ್ರಾಂಶುಪಾಲರು ಪತ್ರಿಕಾಗೋಷ್ಟಿ ನಡೆಸಿದ ಹಿನ್ನಲೆಯಲ್ಲಿ, ಅಲ್ಲಿ ಉಲ್ಲೇಖಿಸಿದ ಕೆಲವೊಂದು ಸತ್ಯೆಕ್ಕೆ ದೂರವಾದ ವಿಚಾರದ ಆಧಾರಲ್ಲಿ ಗಂಭೀರ ಚರ್ಚೆಗಳು ನಡೆಯಿತು.ಪ್ರಾಂಶುಪಾಲುರು ನೀಡಿದ ಹೇಳಿಕೆಯಂತೆ ತಾವು ಧರಿಸುವ ವಸ್ರ್ತ ಧಾರಣೆಯು ತಮ್ಮ ಧಾರ್ಮಿಕ ನಂಬಿಕೆಯ ಆಧಾರದಲ್ಲಿ ಇರುವುದರಿಂದ ಯಾರಿಗೂ ಇದರಿಂದ ತೊಂದರೆ ಇಲ್ಲ, ಆದರೆ ವಿದ್ಯಾರ್ಥಿಗಳಿಗೆ ಮಾತ್ರ ಅವರ ಧರ್ಮದ ನಂಬಿಕೆಯನ್ನು ಪಾಲಿಸಲು ಅವಕಾಶ ಇಲ್ಲ.ಅಲ್ಲದೆ ವಿದ್ಯಾರ್ಥಿಗಳಿಗೆ ದಾಖಲಾತಿ ಸಂಧರ್ಭದಲ್ಲಿ ಡೈರಿಯನ್ನು ನೀಡದೇ,ಯಾವುದೇ ಲಿಖಿತ ರೂಪದಲ್ಲಿ ಪಡೆದಿಲ್ಲ,ಹಾಗು ಅಸಂವಿಧಾನಿಕವಾದಂತಹ ಯಾವುದೇ ನೀತಿ ನಿಯಮಗಳನ್ನು ರೂಪಿಸುವ ಅಧಿಕಾರ ಶಿಕ್ಷಣ ಸಂಸ್ಥೆಗಳಿಗೆ ಇಲ್ಲ. ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ಧಾರ್ಮಿಕ ಹಕ್ಕುಗಳನ್ನು ಅನುಸರಿಸಲು ಅವಕಾಶ ಮಾಡಿಕೊಡಬೇಕು ಮತ್ತು ಕೇವಲ ಕೆಲವು ವಿದ್ಯಾರ್ಥಿಗಳು ತಪ್ಪೊಪ್ಪಿಗೆ ಪತ್ರ ನೀಡಿದ್ದಾರೆಂದು ಪ್ರಾಂಶುಪಾಲರು ಹೇಳುತ್ತಿದ್ದಾರೆ, ಆದರೆ ಬಹುತೇಕ ವಿದ್ಯಾರ್ಥಿಗಳು ತಮ್ಮ ಹಕ್ಕಿಗೋಸ್ಕರ ನಿರಂತರ ಪ್ರಯತ್ನಿಸುತ್ತಿದ್ದಾರೆ. 
ಪ್ರಾಂಶುಪಾಲರು ತಮ್ಮ ಕಾಲೇಜಿನ ನಿಯಮಾವಳಿಯಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದು ಹೇಳುತ್ತಿರುವುದು ಸಂವಿಧಾನದ ಸ್ಪಷ್ಟ ಉಲ್ಲಂಘನೆಯಾಗಿದೆ, ಆದುದರಿಂದ ವಿದ್ಯಾರ್ಥಿಗಳ ಬೇಡಿಕೆಯನ್ನ ಈಡೇರಿಸಿ ಕೂಡಲೇ ಈ ಸಮಸ್ಯೆಯನ್ನು ಬಗೆಹರಿಸಬೇಕು ಇಲ್ಲದಿದ್ದರೆ, ಮುಂದಿನ ದಿನಗಳಲ್ಲಿ ತೀರ್ವ ರೀತಿಯ ಹೋರಾಟ ನಡೆಸಲಿದ್ದೇವೆ ಮುಸ್ಲಿಂ ಮುಖಂಡರ ವೇದಿಕೆಯ ಸಭೆಯಲ್ಲಿ ಅಧ್ಯಕ್ಷರಾದ ಮಾಜಿ ಮೇಯರ್ ಅಶ್ರಫ್‍ರವರು ತಿಳಿಸಿದ್ದಾರೆ. ಸಭೆಯಲ್ಲಿ ಮುಸ್ಲಿಂ ಮುಖಂಡರ ವೇದಿಕೆ ಉಪಸಂಚಾಲಕ ಸುಹೈಲ್ ಖಂದಕ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ತಫ್ಸೀರ್, ಸದಸ್ಯರಾದ ಜಾಫರ್ ಸಾಧಿಕ್ ಫೈಝಿ, ನಯಾಝ್ ಉಳ್ಳಾಲ, ಅತಾವುಲ್ಲಾ ಜೋಕಟ್ಟೆ, ನಝೀರ್, ಇಮ್ರಾನ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News