×
Ad

ಹೋಮ್‌ವರ್ಕ್ ಮಾಡಿಲ್ಲ ಎಂದು ವಿದ್ಯಾರ್ಥಿನಿಗೆ ಹಲ್ಲೆ: ಶಿಕ್ಷಕಿ ವಿರುದ್ಧ ದೂರು

Update: 2018-06-30 00:03 IST

ಉಳ್ಳಾಲ, ಜೂ. 29: ಶಾಲೆಯ ಮುಖ್ಯ ಶಿಕ್ಷಕಿಯೊಬ್ಬರು ಶಾಲೆಯಲ್ಲಿ ನೀಡಿದ ಹೋಮ್‌ವರ್ಕ್ ಮಾಡಿಲ್ಲ ಎಂದು ಆರೋಪಿಸಿ 4ನೇ ತರಗತಿ ವಿದ್ಯಾರ್ಥಿನಿಗೆ ಹೊಡೆದಿದ್ದು, ಗಾಯಗೊಂಡಿರುವ ವಿದ್ಯಾರ್ಥಿನಿಯನ್ನು ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಿನ್ಯ ಗ್ರಾಮದ ಅಜ್ಜಿನಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ 4ನೇ ತರಗತಿ ವಿದ್ಯಾರ್ಥಿನಿ ಹೊಡೆತ ತಿಂದು ಗಾಯಗೊಂಡಿರುವ ವಿದ್ಯಾರ್ಥಿನಿಯಾಗಿದ್ದಾಳೆ. ವಿದ್ಯಾರ್ಥಿನಿಯು ಶಾಲೆಯಲ್ಲಿ ನೀಡಿದ ಹೋಮ್‌ವರ್ಕ್ ಮಾಡಿಲ್ಲ ಎಂದು ಆರೋಪಿಸಿ ಶಾಲಾ ಮುಖ್ಯ ಶಿಕ್ಷಕಿ ಶಾರದಾ ಎಂಬುವವರು ವಿದ್ಯಾರ್ಥಿನಿಯ ಬೆನ್ನಿಗೆ ಮತ್ತು ಕೈಗೆ ಬೆತ್ತದಿಂದ ಹೊಡೆದಿದ್ದಾರೆ ಎನ್ನಲಾಗಿದೆ.

ಶಿಕ್ಷಕಿಯ ಹೊಡೆತೆದಿಂದ ಗಾಯಗೊಂಡಿರುವ ವಿದ್ಯಾರ್ಥಿನಿಯ ತಂದೆ ಚೈಲ್ಡ್ ಲೈನ್‌ಗೆ ದೂರು ನೀಡಿದ್ದು, ಚೈಲ್ಡ್‌ಲೈನ್‌ನ ಅಧಿಕಾರಿಗಳು ಆಗಮಿಸಿ ವಿದ್ಯಾರ್ಥಿನಿಯಿಂದ ಮಾಹಿತಿ ಪಡೆದು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News