ಬಡವರ ಕಣ್ಣೀರೊರೆಸುವ ಕಾರ್ಯಕ್ಕೆ ಇಸ್ಲಾಂನಲ್ಲಿ ಮಹತ್ವ: ಇಕ್ರಾಮುಲ್ಲಾ ಸಖಾಫಿ
ಕುಂದಾಪುರ, ಜೂ.30: ಬಡ ಕುಟುಂಬಗಳ ಮದುವೆ, ಮನೆ ನಿರ್ಮಾಣ, ಪುಸ್ತಕ ವಿತರಣೆ, ಅನಾಥ-ಅಗದಿಗಳಿಗೆ ಸಹಾಯಧನ ಹೀಗೆ ಬಡವರ ಕಣ್ಣೀರೊರೆಸುವ ಕಾರ್ಯಗಳಿಗೆ ಇಸ್ಲಾಂ ಅಧಿಕ ಮಹತ್ವ ನೀಡಿದೆ ಎಂದು ನಾವುಂದ ಕೇಂದ್ರ ಜುಮಾ ಮಸೀದಿಯ ಮುದರಿಸ್ ಅಲ್ಹಾಜಿ ಇಕ್ರಾ ಮುಲ್ಲಾ ಸಖಾಫಿ ಹೇಳಿದ್ದಾರೆ.
ನಾವುಂದ ಕೋಯನಗರದ ಎಸ್‌ಜೆಬಿ ಕೋಯ ಕಟ್ಟಡದಲ್ಲಿ ಬದ್‌ರುಲ್ ಹುದಾ ವೆಲ್ಫೇರ್ ಅಸೋಸಿಯೇಷನ್ ಸಮಿತಿಯ ಹೊಸ ಕಛೇರಿಯನ್ನು ಇತ್ತೀಚೆಗೆ ಉದಾ್ಘಟಿಸಿ ಅವರು ಮಾತನಾಡುತ್ತಿದ್ದರು.
ಅಧ್ಯಕ್ಷತೆಯನ್ನು ನಾವುಂದ ಜಮಾಅತ್ ಕಮಿಟಿ ಅಧ್ಯಕ್ಷ ತೌಫೀಖ್ ಅಬ್ದುಲ್ಲಾ ಹಾಜಿ ವಹಿಸಿದ್ದರು. ಕೋಯನಗರ ನೂರುಲ್ ಹುದಾ ಮಸೀದಿ ಇಮಾಮ್ ಕೊಂಬಾಳಿ ಕೆ.ಎಂ.ಎಚ್.ಝುುರಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಹಿರಿಯರಾದ ಹಾಜಿ ಅಯ್ಯೂಬ್ ಮುಸ್ಲಿಯಾರ್, ಬಿ.ಎ.ಕೆ.ಸಯ್ಯಿದ್ ಹಾಜಿ, ಎ.ಜೆ.ಬಿ.ಕೋಯ ಹಾಜಿ, ಮುಹಮ್ಮದಲೀ ಹಾಜಿ, ಮೊಹಲ್ಲಾ ಕಮಿಟಿ ಅಧ್ಯಕ್ಷ ಇರ್ಷಾದ್, ಕೋಶಾಧಿಕಾರಿ ಸತ್ತಾರ್ ಗಂಗೊಳ್ಳಿ, ಬದ್‌ರುಲ್ ಹುದಾ ಕಮಿಟಿ ಅಧ್ಯಕ್ಷ ಸಮೀರ್ ಮುಲ್ಲಾ ಉಪಸ್ಥಿತರಿದ್ದರು.
ಮೊಹಲ್ಲಾ ಕಮಿಟಿ ಪ್ರಧಾನ ಕಾರ್ಯದರ್ಶಿ ಅಡ್ವಕೇಟ್ ಇಲ್ಯಾಸ್ ನಾವುಂದ ಸ್ವಾಗತಿಸಿ, ಇಖ್ಬಾಲ್ ದಾರಿಮಿ ವಂದಿಸಿದರು. ಬದ್‌ರುಲ್ ಹುದಾ ಕಮಿಟಿ ಪ್ರಧಾನ ಕಾರ್ಯದರ್ಶಿ ಕೆ.ಎಂ.ಇರ್ಷಾದ್ ಕಾರ್ಯಕ್ರಮ ನಿರೂಪಿಸಿದರು.