ಮಟ್ಕಾ ಜುಗಾರಿ: ಏಳು ಮಂದಿ ಬಂಧನ
Update: 2018-06-30 21:13 IST
ಉಡುಪಿ, ಜೂ.30: ಉಡುಪಿ ಜಿಲ್ಲೆಯಾದ್ಯಂತ ಜೂ.29ರಂದು ಮಟ್ಕಾ ಪ್ರಕರಣಕ್ಕೆ ಸಂಬಂಧಿಸಿ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸರು ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಬಳಿ ಅಮ್ಮುಂಜೆಯ ಉಮೇಶ್ ಮೈಂದನ್(32), ಉಡುಪಿ ನಗರ ಪೊಲೀಸರು ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಬಳಿ ಪೆರ್ಡೂರಿನ ನಿತಿನ್ ಪೂಜಾರಿ(24), ಉಡುಪಿ ಡಿಸಿಐಬಿ ಪೊಲೀಸರು ಉಡುಪಿ ಸಿಟಿ ಬಸ್ ನಿಲ್ದಾಣದ ಬಳಿ ಮಾರ್ಪಳ್ಳಿಯ ಪ್ರಶಾಂತ ಸೊಣಗಾರ (29), ಅಲೆವೂರಿನ ಸದಾಶಿವ(30), ಕಡೆಕಾರಿನ ಸಂತೋಷ್(41), ಹೆಬ್ರಿ ಪೊಲೀಸರು ಕಳ್ತೂರು ಗ್ರಾಮದ ಸಂತೆಕಟ್ಟೆ ಬಸ್ ನಿಲ್ದಾಣದ ಬಳಿ ಕರ್ಜೆಯ ಹರಿಶ್ಚಂದ್ರ(46) ಮತ್ತು ಸಂತೆಕಟ್ಟೆಯ ಜಗನ್ನಾಥ(62) ಎಂಬವರನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.