ಪತ್ರಿಕಾ ಕಚೇರಿಯ ಮೇಲೆ ದಾಳಿ ಪ್ರಕರಣ: ಆರೋಪಿಯನ್ನು 5 ವರ್ಷ ಹಿಂದೆ ವಿಚಾರಿಸಿ ಬಿಡಲಾಗಿತ್ತು
ಅನ್ಯಾಪಲಿಸ್ (ಅಮೆರಿಕ), ಜೂ. 30: ಮೇರಿಲ್ಯಾಂಡ್ ರಾಜ್ಯದ ರಾಜಧಾನಿ ಅನ್ಯಾಪಲಿಸ್‌ನಲ್ಲಿರುವ ‘ಕ್ಯಾಪಿಟಲ್ ಗಝೆಟ್’ ಪತ್ರಿಕೆಯ ಕಚೇರಿಯಲ್ಲಿ ಐವರನ್ನು ಹತ್ಯೆ ಮಾಡಿದ ಆರೋಪಿಯನ್ನು ಪತ್ರಿಕೆಯ ಸಿಬ್ಬಂದಿಗೆ ಟ್ವಿಟರ್‌ನಲ್ಲಿ ಬೆದರಿಕೆ ಹಾಕಿದ ಆರೋಪದಲ್ಲಿ ಐದು ವರ್ಷಗಳ ಹಿಂದೆ ವಿಚಾರಣೆಗೊಳಪಡಿಸಲಾಗಿತ್ತು.
ಆದರೆ, ಪ್ರಕರಣದ ತನಿಖೆ ನಡೆಸಿದ ಅಧಿಕಾರಿಯು, ಆರೋಪಿ ಜೆರ್ರೋಡ್ ವಾರನ್ ರಾಮೊಸ್ ಬೆದರಿಕೆಯಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದರು ಹಾಗೂ ಪರಿಸ್ಥಿತಿ ವಿಷಮಿಸುವ ಭೀತಿಯಲ್ಲಿ ಪತ್ರಿಕೆಯು ದೂರು ಸಲ್ಲಿಸಿರಲಿಲ್ಲ.
ಆರೋಪಿಯು ಗುರುವಾರ ಪತ್ರಿಕೆಯ ಸುದ್ದಿಮನೆಗೆ ಹೋಗುವ ಮೊದಲು ಅಲ್ಲಿಂದ ಯಾರೂ ತಪ್ಪಿಸಿಕೊಳ್ಳದಂತೆ ಖಾತರಿಪಡಿಸಲು ಬಾಗಿಲುಗಳಿಗೆ ತಡೆಬೇಲಿಗಳನ್ನು ಇರಿಸಿದ್ದನು. ಬಳಿಕ ಸುದ್ದಿಮನೆಗೆ ನುಗ್ಗಿ 12-ಗೇಜ್ ಪಂಪ್ ಆ್ಯಕ್ಷನ್ ಶಾಟ್‌ಗನ್‌ನಿಂದ ಮೂವರು ಸಂಪಾದಕರು, ಓರ್ವ ವರದಿಗಾರ ಮತ್ತು ಓರ್ವ ಪ್ರಸರಣ ಸಿಬ್ಬಂದಿಯನ್ನು ಕೊಂದನು.
ಜುಲೈ 16ರಂದು ಫಿನ್‌ಲ್ಯಾಂಡ್ ರಾಜಧಾನಿ ಹೆಲ್ಸಿಂಕಿಯಲ್ಲಿ ನಡೆಯಲಿರುವ ಶೃಂಗಸಭೆಯಲ್ಲಿ, 2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಶ್ಯ ನಡೆಸಿದೆಯೆನ್ನಲಾದ ಹಸ್ತಕ್ಷೇಪದ ಬಗ್ಗೆ ನಾನು ರಶ್ಯ ಅಧ್ಯಕ್ಷ ವ್ಲಾದಿಮರ್ ಪುಟಿನ್‌ರೊಂದಿಗೆ ಮಾತನಾಡುತ್ತೇನೆ. ಸಿರಿಯ ಮತ್ತು ಯುಕ್ರೇನ್ ಸಂಘರ್ಷಗಳು ಹಾಗೂ ಇತರ ಅಂತಾರಾಷ್ಟ್ರೀಯ ವಿದ್ಯಮಾನಗಳ ಬಗ್ಗೆಯೂ ಪುಟನ್ ಜೊತೆ ಮಾತುಕತೆ ನಡೆಸುತ್ತೇನೆ.
ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ