ಉಡುಪಿ ಜಿಲ್ಲಾಸ್ಫತ್ರೆ ವೈದ್ಯರಿಗೆ ಗೌರವಾರ್ಪಣೆ
Update: 2018-06-30 21:32 IST
ಉಡುಪಿ, ಜೂ.30: ಉಡುಪಿ ಜಯಂಟ್ಸ್ ಗ್ರೂಪ್ ವತಿಯಿಂದ ಉಡುಪಿ ಜಿಲ್ಲಾ ಆಸ್ಪತ್ರೆಯ ವೈದ್ಯರನ್ನು ಗೌರವಿಸುವ ಮೂಲಕ ವೈದ್ಯರ ದಿನವನ್ನು ಶನಿವಾರ ಆಚರಿಸಲಾಯಿತು.
ಜಿಲ್ಲಾ ಸರ್ಜನ್ ಡಾ.ಮಧುಸೂದನ್ ನಾಯಕ್, ವೈದ್ಯರಾದ ಡಾ.ಚಂದ್ರ ಶೇಖರ ಅಡಿಗ, ಡಾ.ನಾಗೇಶ್, ಡಾ. ಉದಯ ಶಂಕರ, ಡಾ.ಭವಾನಿ ಶಂಕರ, ಡಾ.ನಿತ್ಯಾನಂದ ನಾಯಕ್, ಡಾ.ಸುಭಾಸ್, ಡಾ.ಗಣೇಶ್ ನಾಯಕ್, ಡಾ.ವೀಣಾ ಕುಮಾರಿ, ಡಾ.ಶಶಿಕುಮಾರ್, ಡಾ.ವಾಸುದೇವ, ಡಾ.ಮುರಳೀ ದರ ಪಾಟೀಲ, ಡಾ.ಉಮೇಶ್ ಉಪಾದ್ಯಾಯ, ಡಾ.ಮಂಜುನಾಥ ಮೇಸ್ತ, ಡಾ.ರಮೇಶ್, ಡಾ.ವೇಣುಗೋಪಾಲ ಯು., ಡಾ.ಅಮ್ನ ಅರುಣಾಚಲ ಹೆಗ್ಡೆ, ಡಾ.ಪ್ರಕಾಶ್ ಅವರನ್ನು ಗೌರವಿಸಲಾಯಿತು.
ಉಡುಪಿ ಜಯಂಟ್ಸ್ ಅಧ್ಯಕ್ಷ ಅನಂದ್ ಉದ್ಯಾವರ್, ಜಯಂಟ್ಸ್ ಸೆಂಟ್ರಲ್ ಕಮಿಟಿ ಸದಸ್ಯ ದಿನಕರ ಅಮೀನ್, ಪೂರ್ವಾಧ್ಯಕ್ಷ ಚಿದಾನಂದ ಪೈ, ರಮೇಶ್ ಪೂಜಾರಿ, ಉಷಾ ರಮೇಶ್, ರಾಜೇಶ್ ಶೆಟ್ಟಿ, ತೇಜೇಶ್ವರ್ ರಾವ್, ದೇವದಾಸ ಕಾಮತ್ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯದರ್ಶಿ ಗಣೇಶ್ ಉರಾಳ್ ವಂದಿಸಿದರು.