×
Ad

ದ.ಕ.ಜಿಲ್ಲಾ ಪತ್ರಕರ್ತರ ಸಂಘ-ಅರಣ್ಯ ಇಲಾಖೆಯಿಂದ ವನಮಹೋತ್ಸವ

Update: 2018-06-30 21:37 IST

ಮಂಗಳೂರು, ಜೂ.30:ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಅರಣ್ಯ ಇಲಾಖೆಯ ಸಹಯೋಗದೊಂದಿಗೆ ವನಮಹೋತ್ಸವ ಕಾರ್ಯಕ್ರಮ ಶನಿವಾರ ಪತ್ರಿಕಾಭವನ ಆವರಣದಲ್ಲಿ ನಡೆಯಿತು.

ಹಿರಿಯ ಪತ್ರಕರ್ತೆ ಸತ್ಯಾ ಕೆ. ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಮಂಗಳೂರು ವಲಯ ಅರಣ್ಯಾಧಿಕಾರಿ ಪಿ.ಶ್ರೀಧರ್ ಮಾತನಾಡಿ, ಗಿಡನೆಡಲು ಜಾಗ ಎಲ್ಲಿದೆ ಎಂದು ಹುಡುಕುವ ಮೊದಲು ಮನಸ್ಸಿನಲ್ಲಿ ಜಾಗ ನೀಡಬೇಕು. ಪರಿಸರ ಪ್ರೀತಿಯಿದ್ದರೆ ಗಿಡಗಳನ್ನು ನೆಡಲು ಜಾಗ ಸಿಕ್ಕೇ ಸಿಗುತ್ತದೆ. ಸಾರ್ವಜನಿಕರು ಅರಣ್ಯ ರಕ್ಷಣೆಗೆ ಆದ್ಯತೆ ನೀಡಬೇಕು ಎಂದರು.

ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಇಂದಾಜೆ, ಹಿರಿಯ ಪತ್ರಕರ್ತರಾದ ರಾಮಕೃಷ್ಣ ಆರ್., ಪ್ರಕಾಶ್ ಮಂಜೇಶ್ವರ, ಜಿತೇಂದ್ರ ಕುಂದೇಶ್ವರ, ಗಣೇಶ್ ಮಾವಂಜಿ, ಇಬ್ರಾಹೀಂ ಅಡ್ಕಸ್ಥಳ, ಸುರೇಶ್ ಡಿ.ಪಳ್ಳಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News