×
Ad

ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ: ಸಚಿವ ಖಾದರ್

Update: 2018-06-30 22:11 IST

ಕೊಣಾಜೆ, ಜೂ. 30: ಜಿಲ್ಲೆಯಲ್ಲಿ ಕಾಂಗ್ರೆಸ್ ಹಿನ್ನೆಡೆ ಕಂಡಿದೆ ಎಂಬ ಕಾರಣದಿಂದ ರಾಜಕೀಯ ಮುಗಿದು ಹೋಗುವುದಿಲ್ಲ. ಸೋಲು ಈ ಹಿಂದೆಯೋ ಕಂಡಿದೆ. 1994ರಲ್ಲಿ ಕೇವಲ 34 ಸ್ಥಾನಗಳನ್ನು ಕಂಡಿದ್ದ ಕಾಂಗ್ರೆಸ್ 1999 ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬಂದಿತ್ತು. 2008ರಲ್ಲಿ ಅಧಿಕಾರ ಕಳಕೊಂಡ ಕಾಂಗ್ರೆಸ್ 2013ರಲ್ಲಿ ಸ್ಪಷ್ಟ ಬಹುಮತದಿಂದ ಅಧಿಕಾರ ಹಿಡಿದಿತ್ತು. ಈಗ ಸಮ್ಮಿ ಶ್ರ ಸರಕಾರ ಇದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬರಲಿದೆ ಎಂದು  ಸಚಿವ ಯು.ಟಿ.ಖಾದರ್ ವಿಶ್ವಾಸ ವ್ಯಕ್ತಪಡಿಸಿದರು.

ಅವರು ಮುಡಿಪು ಬ್ಲಾಕ್ ಕಾಂಗ್ರೆಸ್ ವತಿಯಿಂದ ಶನಿವಾರ ಮುಡಿಪುವಿನಲ್ಲಿ ನಡೆದ ಕಾರ್ಯಕರ್ತರಿಗೆ ಕೃತಜ್ಞತೆ ಮತ್ತು ಸಚಿವ ಯು.ಟಿ.ಖಾದರ್ ಹಾಗೂ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾದ ಹರೀಶ್ ಕುಮಾರ್ ಸನ್ಮಾನ ಕಾರ್ಯಕ್ರವುದಲ್ಲಿ ಭಾಗವಹಿಸಿ ಮಾತನಾಡಿದರು.

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ತಂತ್ರ, ಕುತಂತ್ರ, ರಾಜಕೀಯ ಒಳ ಒಪ್ಪಂದ ನಡೆಸಿ ನನ್ನನ್ನು ಸೋಲಿಸಲು ಪ್ರಯತ್ನಿಸಿದರೂ ಅದು ಅವರಿಂದ ಸಾಧ್ಯವಾಗಲಿಲ್ಲ. ನನ್ನ ಗೆಲುವಿನ ಹಿಂದೆ ಕಾರ್ಯಕರ್ತರ ಶ್ರಮ ಬಹಳಷ್ಟಿದೆ. ಅವರ ಸೇವೆಯನ್ನು ನಾನು ಸದಾ ಸ್ಮರಿಸುತ್ತೇನೆ ಎಂದು ಹೇಳಿದರು.

ರಾಜಕೀಯದಲ್ಲಿ ಬದಲಾವಣೆ ಸಹಜ. ಮಂಗಳೂರು ಕಾಂಗ್ರೆಸ್‌ನ ಭದ್ರಕೋಟೆಯಾಗಿದೆ. ಇಲ್ಲಿ ನನ್ನ ಪ್ರತಿಸ್ಪರ್ಧಿಯಾಗಿದ್ದ ಬಿಜೆಪಿ ಅಭ್ಯರ್ಥಿಗೆ ಅವರ ಊರಿನಲ್ಲೇ ಮುನ್ನಡೆ ಸಾಧಿಸಲು ಆಗಲಿಲ್ಲ. ಬಿಜೆಪಿ ಸೋತರೆ ಚಪ್ಪಲಿ ಹಾಕುವುದಿಲ್ಲ ಎಂದವರಿಗೆ ಚಪ್ಪಲಿ ಹಕಲು ಯೋಗ್ಯತೆ ಇದೆಯಾ ಎಂದು ಪ್ರಶ್ನಿಸಿದ ಅವರು ಧ್ವೇಷ ರಾಜಕೀಯ ಬೇಡ. ಕಾಂಗ್ರೆಸ್ನದ್ದುದ್ವೇಷ ಸಂಸ್ಕೃತಿಯಲ್ಲ. ಪ್ರೀತಿಯ ಸಂಸ್ಕೃತಿ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಮಾತನಾಡಿ, ಸೋಲಿನಿಂದ ದೃತಿಗೆಡಬಾರದು. ಬಿಜೆಪಿಯ ಅಪಪ್ರಚಾರಕ್ಕೆ ಪ್ರತಿತಂತ್ರ ರೂಪಿಸಿ ಗೆಲ್ಲುವ ಕೆಲಸ ನಾವು ಮಾಡಬೇಕಾಗಿದೆ. ಇವಿಎಂ ಮತಯಂತ್ರದ ಬದಲು ಬ್ಯಾಲೆಟ್ ಪೇಪರ್‌ನಲ್ಲಿ ಮತದಾನ ಆಗಬೇಕು ಎಂದರು.

ಈ ಸಂದರ್ಭ ಸಚಿವ ಯು.ಟಿ. ಖಾದರ್ ಮತ್ತು ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾದ ಹರೀಶ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ ಕಾಯರ್ಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಬಂಟ್ವಾಳ ತಾ.ಪಂ. ಅಧ್ಯಕ್ಷ ಚಂದ್ರಹಾಸ್ ಕರ್ಕೇರಾ, ಜಿಪಂ. ಸದಸ್ಯ ಮಮತಾ ಗಟ್ಟಿ, ಮುಡಿಪು ಬ್ಲಾಕ್ ಉಪಾಧ್ಯಕ್ಷ ನಾಸೀರ್ ನಡುಪದವು, ಪ್ರಧಾನ ಕಾರ್ಯದರ್ಶಿ ಜಲೀಲ್ ಮೋಂಟುಗೋಳಿ, ವೀಕ್ಷಕ ಹಿಲ್ಡಾ ಆಳ್ವ, ಉಮರ್ ಪಜೀರ್, ಡಿ.ಸಿ.ಸಿ. ಉಪಾಧ್ಯಕ್ಷ ಟಿ.ಎಸ್. ಅಬ್ದುಲ್ಲಾ ಸಾಮಣಿಗೆ, ತಾ,ಪಂ, ಸದಸ್ಯರಾದ ಹೈದರ್ ಕೈರಂಗಳ, ಸವಿತಾ ಹೇಮಂತ್ ಕರ್ಕೇರಾ, ನರಿಂಗಾನ ಗ್ರಾ.ಪಂ. ಅಧ್ಯಕ್ಷ ಇಸ್ಮಾಯಿಲ್ ಮೀನಂಕೋಡಿ, ಪಜೀರ್ ಗ್ರಾ.ಪಂ. ಅಧ್ಯಕ್ಷ ಸೀತಾರಾಮ ಶೆಟ್ಟಿ, ಸಿದ್ದೀಕ್ ಪಾರೆ, ಪದ್ಮನಾಭ ನರಿಂಗಾನ, ಸಂಘಟನಾ ಕಾರ್ಯದರ್ಶಿ ಬಶೀರ್ ಮುಡಿಪು, ಜನಾರ್ಧನ ಕುಲಾಲ್, ಸ ುರೇಖ, ವನಿತಾ ಸೀತರಾಮ, ಹನೀಫ್ ಮೊಂಟೆಪದವುಜೋಸೆಫ್ ಕುಟ್ಹಿನ್ನಾ, ಅನಿಲ್ ಇರಾ, ಪುದು ಪಂಚಾಯಿತಿ ಅಧ್ಯಕ್ಷ ರಮ್ಲಾನ್ ಮಾರಿಪಲ್ಲ, ವೃಂದಾಪೂಜಾರಿ, ಗಣೇಶ್ ಸಾಲ್ಯಾನ್ ತುಂಬೆ, ಸಮೀರ್ ಪಜೀರ್,  ಮೊದಲಾದವರು ಉಪಸ್ಥಿತರಿದ್ದರು.

ಮುಡಿಪು ಬ್ಲಾಕ್ ಕಾಂಗ್ರೆಸ್‌ನ ಕಾರ್ಯದರ್ಶಿ ಜಲೀಲ್ ಮೋಂಟುಗೋಳಿ ಸ್ವಾಗತಿಸಿದರು. ಇರಾ ಪಂ. ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News