×
Ad

ಜು.3: ಹಜ್ಜ್ ತರಬೇತಿ ಶಿಬಿರ

Update: 2018-06-30 22:16 IST

ಮಂಗಳೂರು, ಜೂ.30: ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ಇದರ ವತಿಯಿಂದ ಜು.3ರಂದು ಬೆಳಗ್ಗೆ 10ರಿಂದ ಅಪರಾಹ್ನ 3ರವರೆಗೆ ನಗರದ ಬಂದರ್‌ನ ಬೀಬಿ ಅಲಾಬಿ ರಸ್ತೆಯ ಹಿದಾಯತ್ ಸೆಂಟರ್‌ನಲ್ಲಿ ಹಜ್ಜ್ ತರಬೇತಿ ಶಿಬಿರ ನಡೆಯಲಿದೆ.

ಮೌಲಾನ ಯಹ್ಯಾ ತಂಙಳ್ ಮದನಿ ಬ್ಯಾರಿ ಭಾಷೆಯಲ್ಲಿ, ಮೌಲಾನ ಮುಫ್ತಿ ಅಬ್ದುಲ್ ಮನ್ನಾನ್ ಸಾಹೇಬ್ ಉರ್ದು ಭಾಷೆಯಲ್ಲಿ, ಮುಹಮ್ಮದ್ ಕುಂಞ ಕನ್ನಡ ಭಾಷೆಯಲ್ಲಿ ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ.

ಕಾರ್ಯಕ್ರಮದಲ್ಲಿ ಹಜ್ಜ್ ಪ್ರಾತಕ್ಷಿಕೆಯ ಸಿ.ಡಿ. ಪ್ರದರ್ಶನವಿದೆ. ಮಾಹಿತಿಗಾಗಿ ಮೊ.ಸಂ. 9449470967, 9845665198 ಅನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News