×
Ad

ದೇರಳಕಟ್ಟೆ: ಕ್ಷೇಮದಲ್ಲಿ ವೈದ್ಯರ ದಿನಾಚರಣೆ; ಸಾಧಕರಿಗೆ ಸನ್ಮಾನ

Update: 2018-06-30 22:43 IST

ಉಳ್ಳಾಲ, ಜೂ. 30: ವೈದ್ಯಕೀಯ ಶಿಕ್ಷಣದ ವೇಳೆ ನೈತಿಕವಾಗಿ ಅಭ್ಯಾಸ ನಡೆಸಿದಾಗ ವೃತ್ತಿಯಲ್ಲಿ ಸಮರ್ಥನೀಯತೆಯನ್ನು ಗಳಿಸಬಹುದು. ಈ ಮೂಲಕ ನ್ಯಾಯಬದ್ಧವಾಗಿ ಕರ್ತವ್ಯ ನಿರ್ವಹಿಸುವುದರಿಂದ ಜನಮಾನಸದಲ್ಲಿ ಶಾಶ್ವತವಾದ ಗೌರವ ಪಡೆಯಲು ಸಾಧ್ಯ ಎಂದು ದೇರಳಕಟ್ಟೆಯ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಉಪ ಕುಲಪತಿ ಪ್ರೊ. ಡಾ. ಸತೀಶ್ ಕುಮಾರ್ ಭಂಡಾರಿ ಹೇಳಿದರು.

ವೈದ್ಯರ ದಿನಾಚರಣೆ ಪ್ರಯುಕ್ತ ದೇರಳಕಟ್ಟೆಯ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಅಧೀನದ ಕ್ಷೇಮ ಚಿಂತನಾ ಸಭಾಂಗಣದಲ್ಲಿ ಶನಿವಾರ ನಡೆದ ಕಾರ್ಯಕ್ರಮದ ಅಧ್ಯಕಕ್ಷತೆ ವಹಿಸಿ ಅವರು ಮಾತನಾಡಿದರು.

ವೈದ್ಯರೆಂದರೆ ನಾಯಕರು, ಜೀವಮಾನ ಕಲಿಯುವವರು, ಸಂವಹನವುಳ್ಳವರು ಹಾಗೂ ವೃತ್ತಿಪರರಾಗಿರುತ್ತಾರೆ. ಇದೆಲ್ಲರ ಜೊತೆಗೆ ವೃತ್ತಿಯಲ್ಲಿ ಸಮಗ್ರತೆ ಮತ್ತು ಬದ್ಧತೆಯನ್ನು ಕಾಪಾಡುವುದರ ಮೂಲಕ ಯಶಸ್ವಿ ವೈದ್ಯನಾಗಬಹುದು. ಇಂತಹ ಬದ್ಧತೆಯನ್ನು ಇಟ್ಟುಕೊಂಡು ದೂರದ ಪಯ್ಯನ್ನೂರಿನಲ್ಲಿ ಕೋಪಿಷ್ಠ ರೋಗಿಗಳ ನಡುವೆ ಯಶಸ್ವಿಯಾಗಿ ಡಾ.ಎ.ಹೆಚ್ ಶೆಣೈ ಮತ್ತು ಗ್ರಾಮೀಣ ಪ್ರದೇಶದಲ್ಲಿ ಬಹಳ ಕಷ್ಟದಿಂದ ಸೇವೆ ನಡೆಸಿ ಜನಮಾನಸದಲ್ಲಿ ಇಂದಿಗೂ ಶಿರಸಿಯ ಡಾ ಅರುಣ್ ಪ್ರಭು ದಂಪತಿಗಳಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ನಿಟ್ಟೆ ಕಾರ್ಕಳ ನಿಟ್ಟೆಯ ಗಜಾರಿಯಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಜಯರಾಮ ರೈ, ಪಯ್ಯನ್ನೂರಿನ ಜನರಲ್ ಸರ್ಜನ್ ಡಾ. ಎಚ್. ಎ. ಶೆಣೈ. ಪುತ್ತೂರಿನ ಖ್ಯಾತ ವೈದ್ಯ ಡಾ. ಭಾಸ್ಕರ್, ಶಿರಸಿಯ ಜನರಲ್ ಸರ್ಜನ್ ಡಾ. ಅರುಣ್ ಪ್ರಭು ಹಾಗೂ ಶಿರಸಿಯ ಅನಸ್ತೇಶಿಯಾ ತಜ್ಞೆ ಡಾ. ಆಶಾ ಪ್ರಭು ಅವರನ್ನು ಸನ್ಮಾನಿಸಲಾಯಿತು.

ವೈಸ್ ಡೀನ್ ಡಾ. ಅಮೃತ್ ಎಂ. ಮಿರಾಜ್ಕರ್, ವೈಸ್ ಡೀನ್ ಡಾ. ಜಯಪ್ರಕಾಶ್ ಶೆಟ್ಟಿ, ಡಾ. ಮಂಜುನಾಥ್ ಆರ್. ಕಾಮತ್, ಡಾ. ರಾಜೀವ್ ಟಿ.ಪಿ ಹಾಗೂ ಡಾ. ದಿಲೀಪ್ ಕೆ.ಎಸ್ ಸನ್ಮಾನಿತರನ್ನು ಪರಿಚಯಿಸಿದರು. ವೈದ್ಯಕೀಯ ಅಧೀಕ್ಷಕ ಮೇಜರ್ ಡಾ. ಶಿವಕುಮಾರ್ ಹೀರೇಮಠ ವಂದಿಸಿದರು. ಕ್ಷೇಮ ಡೀನ್ ಡಾ. ಪಿ.ಎಸ್. ಪ್ರಕಾಶ್ ಸ್ವಾಗತಿಸಿದರು. ಆರ್ಥೊಪೆಡಿಕ್ಸ್ ಪ್ರೊಫೆಸರ್ ಡಾ. ಸಿದ್ದಾರ್ಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News