ಮುಸ್ಲಿಮರನ್ನು ಓಲೈಸುವ ಆಕೆಗೆ ನೀವೇಕೆ ಹೊಡೆಯಬಾರದು?
ಹೊಸದಿಲ್ಲಿ, ಜು.1: ಅಂತರ್ ಧರ್ಮೀಯ ಜೋಡಿಗೆ ಪಾಸ್ ಪೋರ್ಟ್ ನೀಡಲು ಕ್ರಮ ಕೈಗೊಂಡ ನಂತರ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ವಿರುದ್ಧ ನಿರಂತರ ದ್ವೇಷ ಕಾರಲಾಗುತ್ತಿದೆ. ಇಂದು ಸುಷ್ಮಾ ಪತಿ ಸ್ವರಾಜ್ ಕೌಶಲ್ ಅವರಿಗೆ ಟ್ವೀಟ್ ಮಾಡಿದ ಮುಕೇಶ್ ಗುಪ್ತಾ ಎನ್ನುವ ವ್ಯಕ್ತಿಯೊಬ್ಬ, "ಇಂದು ರಾತ್ರಿ ಮನೆಗೆ ಬಂದಾಗ ನೀವೇಕೆ ಆಕೆಗೆ ಹೊಡೆಯಬಾರದು, ಮುಸ್ಲಿಮರನ್ನು ಓಲೈಸಬಾರದು ಎಂದು ಆಕೆಗೆ ಕಲಿಸಿಕೊಡಿ. ಮುಸ್ಲಿಮರು ಎಂದಿಗೂ ಬಿಜೆಪಿಗೆ ಮತ ನೀಡುವುದಿಲ್ಲ ಎಂದು ಆಕೆಗೆ ಹೇಳಿ" ಎಂದು ಟ್ವೀಟ್ ಮಾಡಿದ್ದಾನೆ.
ಈತನ ಟ್ವೀಟ್ ಸ್ಕ್ರೀನ್ ಶಾಟನ್ನು ಸ್ವರಾಜ್ ಕೌಶಲ್ ಟ್ವೀಟ್ ಮಾಡಿದ್ದಾರೆ. ಸುಷ್ಮಾ ಅವರ ಆರೋಗ್ಯದ ಕುರಿತು ಕುಹಕವಾಡುವಂತಹ, ದ್ವೇಷ ಕಾರುವಂತಹ ಟ್ವೀಟನ್ನು ಕಳೆದ ವಾರ ಮಾಡಲಾಗಿತ್ತು.
ತನ್ನ ವಿರುದ್ಧದ ದ್ವೇಷಕಾರುವ ಟ್ವೀಟ್ ಗಳನ್ನು ಉಲ್ಲೇಖಿಸಿರುವ ಸುಷ್ಮಾ ಈ ಬಗ್ಗೆ ಪೋಲ್ ನಡೆಸಿದ್ದು, ಇವರನ್ನು ನೀವು ಅನುಮೋದಿಸುತ್ತೀರಾ ಎಂದು ಟ್ವಿಟ್ಟರ್ ಮತದಾನದಲ್ಲಿ ಸಚಿವೆ ಪ್ರಶ್ನಿಸಿದ್ದಾರೆ.
"ಸ್ನೇಹಿತರೇ: ನಾನು ಕೆಲ ಟ್ವೀಟ್‍ಗಳನ್ನು ಜೋಡಿಸಿದ್ದೇನೆ. ಇದು ಕಳೆದ ಕೆಲ ದಿನಗಳಿಮದ ನಡೆಯುತ್ತಿದೆ. ಇಂಥ ಟ್ವೀಟ್‍ಗಳನ್ನು ನೀವು ಅನುಮೋದಿಸುತ್ತೀರಾ? ದಯವಿಟ್ಟು ಸ್ಪಂದಿಸಿ" ಎಂದು ಸುಷ್ಮಾ ಟ್ವೀಟ್ ಮಾಡಿದ್ದಾರೆ.
— Governor Swaraj (@governorswaraj) June 30, 2018