ಸ್ವಿಸ್ ಬ್ಯಾಂಕ್ ನಲ್ಲಿ ಠೇವಣಿ: 73ನೆ ಸ್ಥಾನಕ್ಕೇರಿದ ಭಾರತ

Update: 2018-07-01 11:10 GMT

ಹೊಸದಿಲ್ಲಿ, ಜು.1: ಸ್ವಿಸ್ ಬ್ಯಾಂಕ್ ಗಳೊಂದಿಗೆ ದೇಶದ ಪ್ರಜೆಗಳು ಹಾಗು ಕಂಪೆನಿಗಳ ಠೇವಣಿಯಲ್ಲಿ ಭಾರತ 73ನೆ ಸ್ಥಾನಕ್ಕೇರಿದೆ. ಈ ಪಟ್ಟಿಯಲ್ಲಿ ಅಮೆರಿಕ ಮೊದಲನೆ ಸ್ಥಾನದಲ್ಲಿದೆ.

2016ರ ವೇಳೆಗೆ ಠೇವಣಿಯ ಭಾರೀ ಪ್ರಮಾಣದ ಇಳಿಕೆಯಿಂದ ಭಾರತವು 88ನೆ ಸ್ಥಾನಕ್ಕೆ ಕುಸಿದಿತ್ತು. ಆದರೆ 2017ರಲ್ಲಿ ಸ್ವಿಸ್ ಬ್ಯಾಂಕ್ ನಲ್ಲಿ ಭಾರತೀಯರ ಠೇವಣಿಯಲ್ಲಿ 50 ಶೇ, ಏರಿಕೆಯಾದದ್ದರಿಂದ ಭಾರತವು 88ನೆ ಸ್ಥಾನದಿಂದ 73ಕ್ಕೇರಿದೆ.

ಪಾಕಿಸ್ತಾನವು ಈ ಪಟ್ಟಿಯಲ್ಲಿ 72ನೆ ಸ್ಥಾನದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News