×
Ad

ಓವರ್ ಟೇಕ್ ಮಾಡಲು ಬಿಡದ ಕೋಪ: ಕಾರಿನಿಂದ ಹೊರಗೆಳೆದು ಚಾಲಕನಿಗೆ ಥಳಿಸಿದ ಬಿಜೆಪಿ ಶಾಸಕನ ಪುತ್ರ

Update: 2018-07-01 16:53 IST

ಹೊಸದಿಲ್ಲಿ, ಜು.1: ಓವರ್ ಟೇಕ್ ಮಾಡಲು ಬಿಡದ ಕಾರಣ ವ್ಯಕ್ತಿಯೊಬ್ಬರನ್ನು ಕಾರಿನಿಂದ ಹೊರಗೆಳೆದ ಬಿಜೆಪಿ ಶಾಸಕನ ಪುತ್ರ ಆತನಿಗೆ ಥಳಿಸಿರುವ ಘಟನೆ ಇಲ್ಲಿನ ಬನ್ಸ್ವಾರಾಸ್ ವಿದ್ಯುತ್ ಕಾಲನಿಯಲ್ಲಿ ನಡೆದಿದೆ.

ಸಿಸಿಟಿವಿಯಲ್ಲಿ ಹಲ್ಲೆಯ ದೃಶ್ಯ ಸೆರೆಯಾಗಿದೆ. ರಸ್ತೆ ಮಧ್ಯೆ ಕಾರನ್ನು ನಿಲ್ಲಿಸುವ ರಾಜಸ್ಥಾನದ ಶಾಸಕ ಧನ್ ಸಿಂಗ್ ರಾವತ್ ರ ಪುತ್ರ ರಾಜಾ ಚಾಲಕನನ್ನು ಹೊರಗೆಳೆಯುತ್ತಾನೆ. ನಂತರ ಹಲ್ಲೆ ನಡೆಸುತ್ತಾನೆ. ಈ ಎಲ್ಲಾ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.

"ಒನ್ ವೇ ರಸ್ತೆಯಲ್ಲಿ ನಾನು ಕಾರಿನಲ್ಲಿ ಹೋಗುತ್ತಿದ್ದೆ. ಓವರ್ ಟೇಕ್ ಮಾಡಲು ಅವರಿಗೆ ಸ್ಥಳ ಸಿಗಲಿಲ್ಲ. ನಾನು ಯಾವುದೇ ಪ್ರಕರಣವನ್ನು ದಾಖಲಿಸುವುದಿಲ್ಲ. ಅವರು ಏಳರಿಂದ ಎಂಟು ಜನರಿದ್ದರು" ಎಂದು ಹಲ್ಲೆಗೊಳಗಾದ ನೀರವ್ ಉಪಾಧ್ಯಾಯ ಹೇಳಿದ್ದಾರೆ.

ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News