ಮಂಗಳೂರು: ರೋಟರಿ ಗವರ್ನರ್ ಪದಗ್ರಹಣ
ಮಂಗಳೂರು, ಜು.1: ರೋಟರಿ 3181ಜಿಲ್ಲೆಯ ನೂತನ ಗವರ್ನರ್ ರೊಟೇರಿಯನ್ ಎಂಪಿಎಚ್ ಎಫ್. ರೋಹಿನಾಥ್ ಪಿ. ಪದಗ್ರಹಣ ಕಾರ್ಯಕ್ರಮವು ಕುಲಶೇಕರದ ಕೊರ್ಡೆಲ್ ಹಾಲ್‌ನಲ್ಲಿ ಇತ್ತೀಚೆಗೆ ಜರುಗಿತು.
ರೋಟರಿ ಸಂಸ್ಥೆಯು 250 ಅಂಗನವಾಡಿಗಳನ್ನು ದತ್ತು ಪಡೆವ ಮಾರ್ಗದರ್ಶಿ ಪತ್ರ ಬಿಡುಗಡೆಗೊಳಿಸಿ ಮಾತನಾಡಿದ ನಿಟ್ಟೆ ವಿನಯ ಹೆಗ್ಡೆ ಬ್ರಿಟಿಷರು ಒಡೆದಾಳುವುದನ್ನೇ ಬಂಡವಾಳ ಮಾಡಿ ಆಳಿದರು ಮತ್ತು ಅಂಥದ್ದೇ ಶಿಕ್ಷಣವನ್ನೂ ನೀಡಿದರು. ದೇಶಕ್ಕೆ ಸ್ವಾತಂತ್ರ ಲಭಿಸಿದಾಗ ನಾನು ತುಂಬಾ ಆಶಯಗಳನ್ನು ಕಂಡ್ಡಿದ್ದೆ. ಈಗೀಗ ಸಮಾಜದಲ್ಲಿ ಒಡಕು ಮೂಡಿಸಿ ವಿಜ್ರಂಭಿಸುವುದನ್ನು ಕಂಡು ಮರುಗುತ್ತಿದ್ದೇನೆ. ರೋಟರಿಯಂತಹ ಸೇವಾ ಸಂಸ್ಥೆಗಳು ಈ ಒಡಕುಗಳನ್ನು ಮೀರಿ ನಿಂತು ಸಮಾಜ ಸೇವೆಗಾಗಿ ತನ್ನನ್ನು ತಾನು ಮುಡಿಪಿಡಬೇಕು ಎಂದರು.
ಪದವಿ ಸ್ವೀಕರಿಸಿ ಮಾತನಾಡಿದ ಗವರ್ನರ್ ರೊಟೇರಿಯನ್ ರೋಹಿನಾಥ್ ರೊಟೇರಿಯನರು ಶೀಮಂತ ಹೃದಯದವರು. ಪೊಲಿಯೋ ಇಡೀ ಲೊಕದ ನಕ್ಷೆಯಿಂದಲೇ ತೆಗೆದವರು. ಇಂದಿಗೆ ಭಾರತದಲ್ಲಿ ಒಂದು ಮಗು ಕುಂಟುತ್ತಾ ನಡೆಯದಿರುವ ದೃಶ್ಯ ರೋಟರಿಯ ಕೊಟ್ಯಾಂತರ ಬಿಲಿಯನ್ ರೂಪಾಯಿ ಖರ್ಚು ಮಾಡಿದ ಹೃದಯ ವ್ಯೆಶಾಲ್ಯದ ಫಲವಾಗಿದೆ ಎಂದರು.
ರೊಟೇರಿಯನ್ ಕೃಷ್ಣ ಶೆಟ್ಟಿ, ರೊಟೇರಿಯನ್ ದೇವ್‌ದಾಸ್ ರಾಯ್, ನಿರ್ಗಮನ ಗವರ್ನರ್ ಎಂ.ಎಂ. ಸುರೇಶ್ ಚಂಗಪ್ಪ ಶುಭಹಾರೈಸಿದರು. ಜಿಲ್ಲಾ ಆಡಳಿತ ಕಾರ್ಯದರ್ಶಿ ವಿಕ್ರಮ್ ದತ್ತ ಸ್ವಾಗತಿಸಿದರು. ಕಾರ್ಯಕ್ರಮ ಕಾರ್ಯದರ್ಶಿ ವಿನಾಯಕ ಪ್ರಭು ವಂದಿಸಿದರು. ಆಲ್ವಿವನ್ ಡೆಸಾ ಕಾರ್ಯಕ್ರಮ ನಿರೂಪಿಸಿದರು.