ಕುಸಿದ ಆಗುಂಬೆ ಘಾಟಿಯ ದುರಸ್ತಿ: ಸಂಚಾರಕ್ಕೆ ಅವಕಾಶ
Update: 2018-07-01 21:51 IST
ಹೆಬ್ರಿ, ಜು.1: ಕೆಲ ದಿನಗಳ ಹಿಂದೆ ಭಾರೀ ಮಳೆಗೆ ಕುಸಿದ ಆಗುಂಬೆ ಘಾಟಿಯ 7ನೇ ತಿರುವಿನ ರಸ್ತೆಯ ಅಂಚನ್ನು ಸಿಮೆಂಟ್ ಚೀಲದಲ್ಲಿ ಮಳು ತುಂಬಿಸಿ ದುರಸ್ತಿಗೊಳಿಸಲಾಗಿದೆ.
ನಿರಂತರ ಮಳೆ ಸುರಿಯುತ್ತಿರುವುದರಿಂದ ದುರಸ್ತಿ ಕಾರ್ಯಕ್ಕೆ ತೊಂದರೆ ಯಾಗಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸೂಕ್ತವಾಗಿ ಸ್ಪಂದಿಸಿ ಶೀಘ್ರವಾಗಿ ದುರಸ್ತಿಗೊಳಿಸಿದ್ದಾರೆ. ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ. ಬಳಿಕ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಘನ ವಾಹನಗಳಿಗೆ ತಾತ್ಕಾಲಿಕವಾಗಿ ಸಂಚಾರ ನಿಷೇಧಿಸಲಾಗಿದೆ.