ತತ್ವಬೋಧಿನಿ ಬೋಧನಾ ತರಬೇತಿ ಕಾರ್ಯಾಗಾರ
Update: 2018-07-01 21:54 IST
ಉಡುಪಿ, ಜು.1: ಕುತ್ಪಾಡಿ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯು ರ್ವೇದ ಮಹಾವಿದ್ಯಾಲಯದ ವಜ್ರಮಹೋತ್ಸವದ ಅಂಗವಾಗಿ ಸಂಹಿತಾ ಸಿದ್ಧಾಂತ ಸ್ನಾತಕೋತ್ತರ ವಿಭಾಗದ ವತಿಯಿಂದ ಸ್ನಾತಕೋತ್ತರ ವಿದ್ಯಾರ್ಥಿಗಳಿ ಗಾಗಿ ಎರಡು ದಿನಗಳ ‘ತತ್ವಬೋಧಿನಿ’ ಬೋಧನಾ ತರಬೇತಿ ಕಾರ್ಯಾಗಾರ ವನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು.
ಕಾರ್ಯಾಗಾರವನ್ನು ಉದ್ಘಾಟಿಸಿದ ಕಾಲೇಜಿನ ಪ್ರಾಂಶುಪಾಲ ಡಾ.ಜಿ. ಶ್ರೀನಿವಾಸ ಆಚಾರ್ಯ ಬೋಧನೆಯಲ್ಲಿ ಪರಿಣಿತರಾಗಬೇಕಾದರೆ ಸಂವಹನ ಕೌಶಲ್ಯವನ್ನು ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ ಡಾ.ನಿರಂಜನ ರಾವ್ ಹಾಗೂ ಸಹಾಯಕ ಮುಖ್ಯಸ್ಥ ಡಾ.ನಾಗರಾಜ್ ಎಸ್. ಶುಭ ಹಾರೈಸಿ ದರು. ಡಾ.ವಿದ್ಯಾಲಕ್ಷ್ಮೀ ಕೆ., ಡಾ.ಅರ್ಹಂತ್ ಕುಮಾರ್ ಎ., ಡಾ.ಲಿಖಿತಾ ಡಿ.ಎನ್. ಸಂಪನ್ಮೂಲ ವ್ಯಕ್ತಿಗಳಾಗಿದ್ದರು.
ಸಂಹಿತಾ- ಸಿದ್ಧಾಂತ ವಿಭಾಗದ ಮುಖ್ಯಸ್ಥ ಡಾ.ಶ್ರೀಕಾಂತ್ ಪಿ.ಎಚ್. ಸ್ವಾಗತಿಸಿದರು. ಸಹ ಪ್ರಾಧ್ಯಾಪ ಸುಬ್ರಹ್ಮಣ್ಯ ಭಟ್ ವಂದಿಸಿದರು.