×
Ad

ಡಾ. ಅಂಬೇಡ್ಕರ್ ಜನ ಸಾಮಾನರಿಗೆ ನ್ಯಾಯ ದೊರಕಿಸಿದ ವ್ಯಕ್ತಿ-ಮಠಂದೂರು

Update: 2018-07-01 22:24 IST

ಪುತ್ತೂರು, ಜು. 1: ಡಾ.ಅಂಬೇಡ್ಕರ್ ಅವರು ಎಲ್ಲರಿಗೂ ಸಮಾನತೆ ಸಿಗಬೇಕಾದರೆ ಜಾತಿ ಪದ್ಧತಿ ಎಂಬ ಮೇಳು ಕೀಳು ಹೋಗಬೇಕೆಂಬ ನಿಟ್ಟಿನಲ್ಲಿ ಹಿಂದೂ ಧರ್ಮಕ್ಕೆ ಪೂರಕವಾಗಿರುವ ಬೌಧ ಧರ್ಮಕ್ಕೆ ಅವರು ಸೇರುವ ಮೂಲಕ ಉತ್ತಮ ಸಂದೇಶ ನೀಡಿದ್ದಾರೆ. ಡಾ. ಜನಸಾಮಾನ್ಯರಿಗೆ ನ್ಯಾಯ ದೊರಕಿಸಿದ ವ್ಯಕ್ತಿಯಾಗಿದ್ದಾರೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ಅವರು ರವಿವಾರ ಪುತ್ತೂರಿನ ಸೈನಿಕ ಭವನದಲ್ಲಿ ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿಯ ತಾಲೂಕು ಶಾಖೆ ವತಿಯಿಂದ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಅವರ 127ನೇ ವರ್ಷದ ಜನ್ಮ ದಿನಾಚರಣೆ ಹಾಗೂ ದಲಿತ್ ಸೇವಾ ಸಮಿತಿ ತಾಲೂಕು ಶಾಖೆಯ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮವನ್ನು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.

ಸಂವಿಧಾನ ಬರೆದಿರುವ ಡಾ. ಅಂಬೇಡ್ಕರ್ ಅವರ ತತ್ವ ಆದರ್ಶಗಳನ್ನೊಳಗೊಂಡ ಅವರ ಸಂವಿಧಾನ ಬರೆದ, ಶಿಕ್ಷಣದ ಸ್ಥಳ, ಹುಟ್ಟಿದ ಸ್ಥಳವನ್ನು ಸೇರಿದಂತೆ ಒಟ್ಟು 5 ಕ್ಷೇತ್ರಗಳಲ್ಲಿ ಪಂಚತೀರ್ಥ ಎಂಬ ಸ್ಮಾರಕ ನಿರ್ಮಾಣವನ್ನು ದೇಶದ ಪ್ರಧಾನಿ ನರೇಂದ್ರ ಮೋದಿ ಕೈಗೆತ್ತಿಕೊಂಡಿದ್ದಾರೆ. ಇದು ಮುಂದೆ ಡಾ. ಬಾಬ ಸಾಹೇಬ್ ಅಂಬೇಡ್ಕರ್ ಅವರ ಅಧ್ಯಾಯನ ಮಾಡಲು ಬಹಳ ಸಹಕಾರಿಯಾಗಲಿದೆ ಎಂದರು.

ಪ್ರಧಾನ ಭಾಷಣ ಮಾಡಿದ ಮಂಗಳೂರು ಕೆಪಿಟಿ ಕಾಲೇಜಿನ ಉಪನ್ಯಾಸಕ ಭಾಸ್ಕರ್ ವಿಟ್ಲ ಅವರು ಭಾವನೆಗಳ ಮೇಲೆ ನಂಬಿಕೆ ಬೇಡ. ಸಾಮೂಹಿಕ ನಾಯಕತ್ವದಲ್ಲಿ ನಂಬಿಕೆ ಇದೆ ಎಂದ ಡಾ. ಅಂಬೇಡ್ಕರ್ ಅವರು ನಾಯಕತ್ವ ಯಾವಾಲು ಸಾಮೂಹಿಕವಾಗಿಲಿ. ಇದು ರಾಜಕೀಯ ಪ್ರಜ್ಞೆ ಎಂದು ಹೇಳಿದರಲ್ಲದೆ ಪಕ್ಷ ರಾಜಕಾರಣವನ್ನು ವಿರೋಧಿಸಿ ಚಳುವಳಿ ರಾಜಕಾರಣವನ್ನು ಬೆಂಬಲಿಸಿದರು. ಈ ನಿಟ್ಟಿನಲ್ಲಿ ನಾವು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಅಭಿಮಾನದ ಬದಲು ಅನುಯಾಯಿಗಳಾಗಬೇಕು ಎಂದರು.

ಪುತ್ತೂರು ಸರಕಾರಿ ಆಸ್ಪತ್ರೆಯ ಡಾ. ಜಗದೀಶ್, ಆಲಂಗಾರು ಹಿ.ಪ್ರಾ.ಶಾಲೆಯ ಮುಖ್ಯಶಿಕ್ಷಕ ನಿಂಗರಾಜು ಮಾತನಾಡಿ ಶುಭ ಹಾರೈಸಿದರು. ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಸೇಸಪ್ಪ ಬೆದ್ರಕಾಡು ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು. ತಾಲೂಕು ಅಧ್ಯಕ್ಷ ರಾಜು ಹೊಸ್ಮಠ ಅಧ್ಯಕ್ಷತೆ ವಹಿಸಿದ್ದರು. ಭ್ರಷ್ಟಾಚಾರ ನಿಗ್ರಹದಳ ಅಪರಾಧ ಪತ್ತೆದಳ ಸಂಘಟನೆಯ ರಾಜ್ಯಾಧ್ಯಕ್ಷ ಪ್ರಶಾಂತ್ ರೈ ಮರವಂಜೆ, ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಆನಂದ ಬೆಳ್ಳಾರೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಅಥ್ಲೆಟಿಕ್ಸ್ ಕ್ರೀಡಾಪಟು ಕಮಲಾ ರಮೇಶ್ ಪಾಜಪಳ್ಳ ಮತ್ತು ಚಲಚಿತ್ರ ಮತ್ತು ರಂಗ ಕಲಾವಿದ ರವಿ ರಾಮಕುಂಜ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ದಲಿತ್ ಸೇವಾ ಸಮಿತಿಯ ವಿವಿಧ ಕಾರ್ಯಚಟುವಟಿಕೆಯಲ್ಲಿ ಸಕ್ರೀಯರಾಗಿದ್ದ ತಾಲೂಕು ಸದಸ್ಯ ಗಣೇಶ್ ಪಡೀಲ್, ಕೋಶಾಧಿಕಾರಿ ಆನಂದ, ದೇವು ದರ್ಬೆ, ಗೋಪಾಲ್, ಮನೋಹರ್, ಲೋಕೇಶ್, ರಮೇಶ್ ಸಾಲ್ಮರ, ಕೇಶವ ಪಡೀಲ್, ಹರೀಶ್, ಜಯಂತ್, ಆನಂದ್ ದರ್ಬೆ, ಸುಂದರ ಕೆಮ್ಮಿಂಜೆ ಅವರನ್ನು ಅಭಿನಂದಿಸಲಾಯಿತು. ತಾಲೂಕು ಸಮಿತಿ ಉಪಾಧ್ಯಕ್ಷ ಮನೋಹರ್ ಕೋಡಿಜಾಲು ಸ್ವಾಗತಿಸಿದರು. ಪ್ರಸಾದ್ ಬೊಳ್ಮಾರು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News