×
Ad

ಮಂಗಳೂರು: ಜೇಡ ಪ್ರಭೇದಗಳ ಛಾಯಾಚಿತ್ರ ಪ್ರದರ್ಶನ

Update: 2018-07-01 22:46 IST

ಮಂಗಳೂರು, ಜು.1: ಕ್ಷೀಣಿಸುತ್ತಿರುವ ಸುಮಾರು 100 ಜೇಡ ಪ್ರಭೇದಗಳ 180ಕ್ಕೂ ಹೆಚ್ಚು ಛಾಯಾಚಿತ್ರಗಳನ್ನು ನಗರದ ಕೊಡಿಯಾಲ್‌ಬೈಲ್‌ನ ಕರ್ಣಾಟಕ ಬ್ಯಾಂಕ್ ಸಭಾಂಗಣದಲ್ಲಿ ರವಿವಾರ ಪ್ರದರ್ಶಿಸಲಾಯಿತು.

ನಗರದಲ್ಲಿ ಇದೇ ಮೊದಲ ಬಾರಿಗೆ ಜೇಡ ಪ್ರಭೇದಗಳ ಛಾಯಾಚಿತ್ರ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು. ಜೇಡಗಳ ಆಹಾರ ವಿಧಾನ, ಪರಿಸರ ಉಳಿಸುವಲ್ಲಿ ಜೇಡಗಳ ಕೊಡುಗೆಯ ಕುರಿತು ಜಾಗೃತಿ ಬರಹಗಳನ್ನು ಈ ಸಂದರ್ಭ ಪ್ರದರ್ಶಿಸಲಾಯಿತು. ಪ್ರದರ್ಶನ ಏರ್ಪಡಿಸಿದ ತಂಡದ ಸದಸ್ಯರು ಜೇಡಗಳ ಕುರಿತ ಮಾಹಿತಿಯನ್ನು ಸಾರ್ವಜನಿಕರೊಂದಿಗೆ ಹಂಚಿಕೊಂಡರು.

ರಾಜ್ಯಾದ್ಯಂತ ಜೇಡ ಪ್ರಭೇದಗಳ ಛಾಯಾಚಿತ್ರ ಪ್ರದರ್ಶನ ಆಯೋಜಿಸಲು ತಂಡ ಮುಂದಾಗಿದೆ. ಈಗಾಗಲೇ ಮಡಿಕೇರಿ, ಮೈಸೂರು, ಚಾಮರಾಜನಗರದಲ್ಲಿ ಪ್ರದರ್ಶನ ನೀಡಲಾಗಿದೆ. ಮುಂದಿನ ತಿಂಗಳು ವಯನಾಡ್ ಮತ್ತು ಕಾಸರಗೋಡಿನಲ್ಲಿ ಪ್ರದರ್ಶನ ನಡೆಯಲಿದೆ ಎಂದು ತಂಡದ ಸದಸ್ಯರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News