×
Ad

ಎಸ್ಸೆಸ್ಸೆಫ್ ವಳವೂರು ಶಾಖೆ ವತಿಯಿಂದ ಮಾಸಿಕ 'ಮಹ್ಳರತುಲ್ ಬದ್ರಿಯ'

Update: 2018-07-01 22:54 IST

ತುಂಬೆ,ಜು.01: ಕೇರಳ ಕರ್ನಾಟಕದಾದ್ಯಂತ ಸುನ್ನೀ ಕಾರ್ಯಕರ್ತರು ತಿಂಗಳಿಗೊಮ್ಮೆ ನಡೆಸಿಕೊಂಡು ಬರುವ ಪರಿಶುದ್ದ ಮಹ್ಳರತುಲ್ ಬದ್ರಿಯಾ ಆತ್ಮೀಯ ಸಂಗಮ ಇಂದು ಎಸ್ಸೆಸ್ಸೆಫ್ ವಳವೂರು ಶಾಖೆಯ ನಝೀರ್ ಉಮ್ಮನಗುಡ್ಡೆ ರವರ ಮನೆಯಲ್ಲಿ ನಡೆಯಿತು.

ಪ್ರಸ್ತುತ ಆಧ್ಯಾತ್ಮಿಕ ಸಂಗಮಕ್ಕೆ ಮಂಗಳೂರು ಡಿವಿಶನ್ ಅಧ್ಯಕ್ಷರಾದ ಜುನೈದ್ ಸಅದಿ ಅಲ್ ಅಫ್ಳಲಿ ವಳವೂರು ನೇತೃತ್ವ ವಹಿಸಿದರು. ಎಸ್ಸೆಸ್ಸೆಫ್ ವಳವೂರು ಶಾಖೆ ಅದ್ಯಕ್ಷರಾದ ಯೂಸುಫ್ ಸಿದ್ದೀಖ್ ಸಖಾಫಿ ವಳವೂರು, ಊರಿನ ಹಿರಿಯರಾದ ಹಸನ್ ಹಾಜಿ, ಸಮದ್ ಹಾಜಿ ಮುಂತಾದ ಹಲವು ಗಣ್ಯ ವ್ಯಕ್ತಿಗಳು ಹಾಗು ಶಾಖೆಯ ಹಲವಾರು ಸುನ್ನೀ ಕಾರ್ಯಕರ್ತರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News