×
Ad

​ಕೆಎಂಡಿಸಿ, ಬಿಐಟಿಯಿಂದ ಮಾಹಿತಿ ಕಾರ್ಯಾಗಾರ

Update: 2018-07-02 17:54 IST

ಮಂಗಳೂರು, ಜು.2: ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ದಿ ನಿಗಮ (ಕೆಎಂಡಿಸಿ) ದ.ಕ., ಉಡುಪಿ ಜಿಲ್ಲೆ ಮತ್ತು ಬ್ಯಾರೀಸ್ ಇನ್‌ಸ್ಟ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಬಿಐಟಿ), ಇನ್ನೊಲಿ, ಕೋಣಾಜೆ ಜಂಟಿ ಸಹಯೋಗದಲ್ಲಿ ಶೈಕ್ಷಣಿಕ ಸಾಲ ‘ಅರಿವು’ ಯೋಜನೆಯ ಮಾಹಿತಿ ಕಾರ್ಯಾಗಾರವನ್ನು ಜು.7ರಂದು ಬೆಳಗ್ಗೆ 9:30ಕ್ಕೆ ಹಮ್ಮಿಕೊಳ್ಳಲಾಗಿದೆ.

ಕಾರ್ಯಾಗಾರವನ್ನು ಬ್ಯಾರೀಸ್ ಇನ್‌ಸ್ಟ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಬಿಐಟಿ), ಇನ್ನೊಲಿ, ಕೋಣಾಜೆಯಲ್ಲಿ ಆಯೋಜಿಸಲಾಗಿದೆ.
2018-19ನೇ ಸಾಲಿನ ಇಂಜಿನಿಯರಿಂಗ್, ಆರ್ಕಿಟೆಕ್ಚರ್ ಮತ್ತು ಡಿಪ್ಲೋಮಾ ಕೋರ್ಸ್‌ಗಳಿಗೆ ಸೇರ ಬಯಸುವ ವಿದ್ಯಾರ್ಥಿಗಳಿಗಾಗಿ ರಾಜ್ಯ ಸರಕಾರದಿಂದ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯದ ಕುರಿತು ಮಾಹಿತಿ ಕಾರ್ಯಾಗಾರ ಏರ್ಪಡಿಸಿದೆ.

ಕಾರ್ಯಾಗಾರಕ್ಕೆ ಎಲ್ಲ ವಿದ್ಯಾರ್ಥಿಗಳು ತಪ್ಪದೇ ಭಾಗವಹಿಸಿ ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳಲು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News