×
Ad

ಜು.7: ​ಕೆಎಂಡಿಸಿ, ಬಿಐಟಿಯಿಂದ ಮಾಹಿತಿ ಕಾರ್ಯಾಗಾರ

Update: 2018-07-02 18:00 IST

ಮಂಗಳೂರು, ಜು.2: ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ದಿ ನಿಗಮ (ಕೆಎಂಡಿಸಿ) ದ.ಕ., ಉಡುಪಿ ಜಿಲ್ಲೆ ಮತ್ತು ಬ್ಯಾರೀಸ್ ಇನ್‌ಸ್ಟ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಬಿಐಟಿ), ಇನ್ನೊಲಿ, ಕೋಣಾಜೆ ಜಂಟಿ ಸಹಯೋಗದಲ್ಲಿ ಶೈಕ್ಷಣಿಕ ಸಾಲ ‘ಅರಿವು’ ಯೋಜನೆಯ ಮಾಹಿತಿ ಕಾರ್ಯಾಗಾರವನ್ನು ಜು.7ರಂದು ಬೆಳಗ್ಗೆ 9:30ಕ್ಕೆ ಹಮ್ಮಿಕೊಳ್ಳಲಾಗಿದೆ.

ಕಾರ್ಯಾಗಾರವನ್ನು ಬ್ಯಾರೀಸ್ ಇನ್‌ಸ್ಟ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಬಿಐಟಿ), ಇನ್ನೊಲಿ, ಕೋಣಾಜೆಯಲ್ಲಿ ಆಯೋಜಿಸಲಾಗಿದೆ. 2018-19ನೇ ಸಾಲಿನ ಇಂಜಿನಿಯರಿಂಗ್, ಆರ್ಕಿಟೆಕ್ಚರ್ ಮತ್ತು ಡಿಪ್ಲೋಮಾ ಕೋರ್ಸ್‌ಗಳಿಗೆ ಸೇರ ಬಯಸುವ ವಿದ್ಯಾರ್ಥಿಗಳಿಗಾಗಿ ರಾಜ್ಯ ಸರಕಾರದಿಂದ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯದ ಕುರಿತು ಮಾಹಿತಿ ಕಾರ್ಯಾಗಾರ ಏರ್ಪಡಿಸಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News