×
Ad

ತುಳು ಸ್ನಾತಕೋತ್ತರ ಪದವಿ ಕೋರ್ಸ್: ಅರ್ಜಿ ಆಹ್ವಾನ

Update: 2018-07-02 19:01 IST

ಮಂಗಳೂರು, ಜು.2: ಕರ್ನಾಟಕ ತುಳು ಸಾಹಿತ್ಯ ಆಕಾಡಮಿಯ ನಿರಂತರ ಪ್ರಯತ್ನದ ಫಲವಾಗಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ತುಳು ಸ್ನಾತಕೋತ್ತರ ಪದವಿ(ಎಂ.ಎ) ಕೋರ್ಸ್‌ಗಾಗಿ ವಿದ್ಯಾರ್ಥಿಗಳಿಂದ ಈಗಾಗಲೇ ಅರ್ಜಿ ಆಹ್ವಾನಿಸಿದೆ.

ಉದ್ಯೋಗದಲ್ಲಿರುವವರಿಗೆ ಅನುಕೂಲವಾಗಲು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು(ಸಂಧ್ಯಾ) ಹಂಪನ್‌ಕಟ್ಟೆ ತರಗತಿ ನಡೆಯಲಿವೆ. ತುಳು ಆಸಕ್ತರು ಇದರ ಪ್ರಯೋಜನ ಪಡೆಯಬಹುದು. ಎಂ.ಎ (ಕನ್ನಡ) ಸೇರಿದಂತೆ ಇತರ ಸಮಾಜವಿಜ್ಞಾನ ಕೋರ್ಸ್‌ಗಳಿಗೆ ಸಮನಾಗಿದ್ದು, ಉದ್ಯೋಗಾಕಾಂಕ್ಷಿಗಳಿಗೆ ಈ ಕೋರ್ಸ್‌ನಿಂದ ಪ್ರಯೋಜನವಾಗಲಿದೆ. ಈಗಾಗಲೇ ತುಳು ಭಾಷೆ ಕಲಿಸಲು ಪದವಿ ಹೊಂದಿದ ಅಧ್ಯಾಪಕರ ಕೊರತೆಯಿದೆ. ಕೋರ್ಸ್‌ನ್ನು ಅಭ್ಯಸಿಸಿದಲ್ಲಿ ಮುಂದಿನ ದಿನಗಳಲ್ಲಿ ಉಜ್ಜಲ ಭವಿಷ್ಯ ಪಡೆಯಬಹುದು.

ಈ ಕೋರ್ಸ್‌ನಲ್ಲಿ ತುಳು ಭಾಷೆಯ ಪ್ರಾಚೀನತೆ, ತುಳು ಸಂಸ್ಕೃತಿ, ತುಳುವರ ಆರಾಧನೆಗಳು ತುಳು ಲಿಪಿ, ತುಳುವರ ಕೃಷಿ ಪದ್ಧತಿ, ವ್ಯಾಪಾರ ಸೇರಿದಂತೆ ತುಳುವರ ಉದ್ಯಮಶೀಲತೆಯ ವಿಷಯಗಳು ಒಳಗೊಂಡಿದೆ. ತುಳುವರು, ತುಳುವ ಸಮಾಜವನ್ನು ಸಂಕ್ಷಿಪ್ತವಾಗಿ ತಿಳಿದುಕೊಳ್ಳಲು ಈ ಕೋರ್ಸ್‌ನಲ್ಲಿ ಅವಕಾಶವಿರುತ್ತದೆ.

ಆಸಕ್ತರು ಈ ಪ್ರಯೋಜನ ಪಡೆದುಕೊಂಡು ವಿಶ್ವವಿದ್ಯಾನಿಲಯ ಆರಂಭಿಸುವ ಈ ಕೋರ್ಸ್‌ಗೆ ಪ್ರವೇಶಾತಿ ಪಡೆದು ತುಳು ಭಾಷೆ, ಸಂಸ್ಕೃತಿಯ ಸಮಗ್ರ ಮಾಹಿತಿ ಪಡೆದುಕೊಳ್ಳಬಹುದು.

ಈ ಕೋರ್ಸ್‌ಗೆ ಸೇರಲು ಯಾವುದೇ ವಿಷಯದಲ್ಲಿ ಪದವಿ ಪಡೆದಿರುವ ಪದವೀಧರರು ಅರ್ಹರಾಗಿದ್ದು, ವಿದ್ಯಾರ್ಥಿಗಳು ಸಂಜೆ ವೇಳೆಯಲ್ಲಿ ಅಭ್ಯಾಸ ಮಾಡಿಕೊಂಡು ಎಂ.ಎ ಸ್ನಾತಕೋತ್ತರ ಪದವಿಯನ್ನು ಪಡೆಯಬಹುದು.

ಆಸಕ್ತರು ಅರ್ಜಿ ಹಾಗೂ ಮಾಹಿತಿ ಪುಸ್ತಕಗಳನ್ನು ಮಂಗಳೂರು ವಿಶ್ವವಿದ್ಯಾನಿಲಯದ ಆಡಳಿತ ಕಚೇರಿ, ಮಂಗಳ ಗಂಗೋತ್ರಿ, ಕೋಣಾಜೆ ಅಥವಾ ವಿಶ್ವವಿದ್ಯಾನಿಲಯ ಕಾಲೇಜು, ಹಂಪನಕಟ್ಟೆ ಇಲ್ಲಿಂದ ಪಡೆದುಕೊಳ್ಳಬಹುದು.

ಅರ್ಜಿ ಸಲ್ಲಿಸಲು ಜು.16 ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ ವಿಶ್ವವಿದ್ಯಾನಿಲಯದ ವೆಬ್‌ಸೈಟ್ www.mangaloreuniversity.ac.in ನ್ನು ಸಂಪರ್ಕಿಸಬಹುದಾಗಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಚಂದ್ರಹಾಸ ರೈ.ಬಿ. ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News