×
Ad

ಕಲ್ಲಡ್ಕ: ಯುವಕನಿಗೆ ಹಲ್ಲೆ, ಕೊಲೆ ಯತ್ನ ಪ್ರಕರಣ; ಆರು ಮಂದಿ ಸೆರೆ

Update: 2018-07-02 21:31 IST
ಕಿರಣ್, ಕೀರ್ತನ್, ಯೋಗಿಶ್, ಲೊಕೇಶ್, ಮೋಹನ್, ವಿಧ್ಯಾಧರ್

ಬಂಟ್ವಾಳ, ಜೂ. 2: ಕಲ್ಲಡ್ಕದಲ್ಲಿ ಯುವಕನೋರ್ವನಿಗೆ ಹಲ್ಲೆ, ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಹಾಗೂ ಉಪ್ಪಿನಂಗಡಿ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರು ಮಂದಿ ಆರೋಪಿಗಳನ್ನು ಸೋಮವಾರ ಬಂಧಿಸಿದ್ದಾರೆ.

ಕಲ್ಲಡ್ಕ ಛತ್ರ ನಿವಾಸಿಗಳಾದ ಕಿರಣ್ (24), ಕೀರ್ತನ್ (22), ಗೋಳ್ತಮಜಲು ನಿವಾಸಿಗಳಾದ ಯೋಗಿಶ್ ಕೆ. (22), ಲೊಕೇಶ್ ಕೆ.(25), ಕೆ.ಸಿ.ರೋಡ್ ಛತ್ರ ಬಳಿಯ ನಿವಾಸಿ ಮೋಹನ್ ಪೂಜಾರಿ (22), ವಿಧ್ಯಾಧರ್ ಪೂಜಾರಿ (23) ಬಂಧಿತ ಆರೋಪಿಗಳು.

ಜೂನ್ 11ರಂದು ಕಲ್ಲಡ್ಕದ ಕೆಳಗಿನಪೇಟೆಯ ಅಂಗಡಿಯೊಂದರಲ್ಲಿ ಕುಳಿತಿದ್ದ ಚೇತನ್ ಅಲಿಯಾಸ್ ಚೇತು ಮೇಲ್ಕಾರ್ (26) ಎಂಬಾತನಿಗೆ ಆರೋಪಿಗಳು ಹಲ್ಲೆ ಮಾಡಿ, ಕೊಲೆಗೆ ಯತ್ನಿಸಿದ್ದಾಗಿ ಚೇತರನ್ ಅವರ ದೂರಿನಂತೆ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತಲೆಮರೆಸಿಕೊಂಡ ಆರೋಪಿಗಳ ಶೋಧ ಕಾರ್ಯ ನಡೆಸಿ,  ಇಂದು ಆರೋಪಿಗಳನ್ನು ದಸ್ತಗಿರಿ ಮಾಡಿ, ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿಕಾಂತೇಗೌಡ ಮಾಹಿತಿ ನೀಡಿದ್ದಾರೆ.

ಕಾರ್ಯಾಚರಣೆ ತಂಡದಲ್ಲಿ ಡಿಸಿಐಬಿ ಪಿ.ಐ. ಸುನಿಲ್ ಕುಮಾರ್, ಬಂಟ್ವಾಳ ನಗರ ಪಿಎಸ್ ಐ ಚಂದ್ರಶೇಖರ್ ಎಚ್.ವಿ, ಅಪರಾಧ ವಿಭಾಗ ಎಸ್.ಐ. ಹರೀಶ್ ಎಂ.ಆರ್, ಸಂಚಾರ ಠಾಣೆ ಪಿಎಸ್ಸೈ ಯಲ್ಲಪ್ಪ, ಉಪ್ಪಿನಂಗಡಿ ಠಾಣೆ ಎಸ್ಸೈ ನಂದಕುಮಾರ್, ಬಂಟ್ವಾಳ ನಗರ, ಸಂಚಾರ ಮತ್ತು ಡಿಸಿಐಬಿ ಸಿಬ್ಬಂದಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News