ಉಪ್ಪೂರು: ಮನೆಯ ಸೊತ್ತು ಕಳವು
Update: 2018-07-02 22:38 IST
ಬ್ರಹ್ಮಾವರ, ಜು.2: ಉಪ್ಪೂರು ಗ್ರಾಮದ ತೆಂಕಬೆಟ್ಟು ಎಂಬಲ್ಲಿ ಜು.1ರಂದು ಬೆಳಗಿನ ಜಾವ ಮನೆಯ ಬಾವಿಯ ಬಳಿ ಇಟ್ಟಿದ್ದ ಸಾವಿರಾರು ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ತೆಂಕಬೆಟ್ಟುವಿನ ರತ್ನಾಕರ ಶೆಟ್ಟಿ ಎಂಬವರ ಎರಡು ತಾಮ್ರದ ಕೊಡಪಾನ, ನಾಲ್ಕು ತಾಮ್ರದ ಹರಿವಾಣ, ನಾಲ್ಕು ಆರತಿ ತಟ್ಟೆ, ಒಂದು ಘಂಟಾಮಣಿ, ಒಂದು ಜಾಗಟೆ ಕಳವು ಮಾಡಲಾಗಿದ್ದು, ಇವುಗಳ ಒಟ್ಟು ವೌಲ್ಯ 20000 ರೂ. ಎಂದು ಅಂದಾಜಿಸಲಾಗಿದೆ.
ಮನೆಯಲ್ಲಿ ಅಳವಡಿಸಲಾದ ಸಿಸಿ ಕ್ಯಾಮರಾವನ್ನು ರತ್ನಾಕರ ಶೆಟ್ಟಿ ಪರಿಶೀಲಿ ಸಿದ್ದು, ಅದರಲ್ಲಿ ಮೂಡಿರುವ ದೃಶ್ಯಾವಳಿ ನೋಡಿದಾಗ ನೇಜಾರಿನ ಸಂತೋಷ್ ಎಂಬವರ ಮೇಲೆ ಸಂಶಯ ಇರುವುದಾಗಿ ದೂರಲಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.