ವ್ಯಕ್ತಿಯ ಅನುಮಾನಾಸ್ಪದ ಸಾವು: ದೂರು
Update: 2018-07-02 22:39 IST
ಬ್ರಹ್ಮಾವರ, ಜು.2: ಚೇರ್ಕಾಡಿ ಗ್ರಾಮದ ಪೇತ್ರಿ ಎಂಬಲ್ಲಿ ಜು.1ರ ಬೆಳಗ್ಗೆ 8.30ರಿಂದ ಜು.2ರ ಬೆಳಗ್ಗೆ 11ಗಂಟೆಯ ಮಧ್ಯಾವಧಿಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.
ಮೃತರನ್ನು ಆರೂರು ಗ್ರಾಮದ ಮೆಲಡ್ಪು ಕಂಬಳಗದ್ದೆ ಕ್ರಾಸ್ ನಿವಾಸಿ ರಾಮ ನಾಯ್ಕ(57) ಎಂದು ಗುರುತಿಸಲಾಗಿದೆ. ಇವರು ಪೇತ್ರಿಯ ಮಂಜುನಾಥ ಹೆಬ್ಬಾರ್ ಎಂಬವರ ಸಾಗುವಾನಿ ತೋಟದಲ್ಲಿ ಆಕಸ್ಮಿಕವಾಗಿ ಮೃತಪಟ್ಟಿದ್ದು, ಮೃತರ ತಲೆಯ ಹಿಂಭಾಗದಲ್ಲಿ ಹಾಗೂ ಎಡ ಕಿವಿಯ ಹಿಂಭಾಗದಲ್ಲಿ ಜಜ್ಜಿದ ಗಾಯದಂತೆ ಕಂಡು ಬಂದಿದೆ.
ಈ ಗಾಯದ ಬಗ್ಗೆ ಸಂಶಯವಿದ್ದು, ಇದರ ಬಗ್ಗೆ ತನಿಖೆ ನಡೆಬೇಕು ಎಂಬುದಾಗಿ ಮೃತರ ಪತ್ನಿ ನಿರ್ಮಲ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.