ಗುಂಡು ಹಾರಿಸಿ ಫಿಲಿಪ್ಪೀನ್ಸ್ ಮೇಯರ್ ಹತ್ಯೆ

Update: 2018-07-02 18:15 GMT

ಮನಿಲಾ, ಜು. 2: ಫಿಲಿಪ್ಪೀನ್ಸ್‌ನ ಬಟಂಗಸ್ ಪ್ರಾಂತದ ತನಾವನ್ ನಗರದ ಮೇಯರ್ ಆಂಟೋನಿಯೊ ಹಲೀಲಿಯನ್ನು ಸೋಮವಾರ ಗುಂಡು ಹಾರಿಸಿ ಕೊಲ್ಲಲಾಗಿದೆ.

ಅವರು ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾಗ ಇತರ ಸಿಬ್ಬಂದಿ ಎದುರಿನಲ್ಲೇ ಅಜ್ಞಾತ ವ್ಯಕ್ತಿಯೊಬ್ಬ ಅವರ ಮೇಲೆ ಗುಂಡು ಹಾರಿಸಿದನು. ಅವರು ಆಸ್ಪತ್ರೆಗೆ ಹೋಗುವ ದಾರಿಯಲ್ಲಿ ಕೊನೆಯುಸಿರೆಳೆದರು.

ಮಾದಕ ದ್ರವ್ಯ ಜಾಲದಲ್ಲಿ ತೊಡಗಿದ ವ್ಯಕ್ತಿಗಳನ್ನು ಅವರು ಸಾರ್ವಜನಿಕವಾಗಿ ಮೆರವಣಿಗೆ ಮಾಡುತ್ತಿದ್ದರು. ಆದರೆ, ಮಾದಕ ದ್ರವ್ಯ ಜಾಲದೊಂದಿಗೆ ಅವರೂ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News