60 ವರ್ಷದ ಮಹಿಳೆಯ ಅತ್ಯಾಚಾರಗೈದ ಅರ್ಚಕ : ಆರೋಪ

Update: 2018-07-03 14:50 GMT

ಗಾಝಿಯಾಬಾದ್, ಜು. ೩: ಗಾಝಿಯಾಬಾದ್‌ನ ಶಹಾನಿ ಗೇಟ್ ಪ್ರದೇಶದ ಪಟೇಲ್‌ನಗರದಲ್ಲಿರುವ ದೇವಾಲಯವೊಂದರಲ್ಲಿ ಅರ್ಚಕನೋರ್ವ 60 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಚರ್ಮ ರೋಗದ ಸಮಸ್ಯೆಯಿಂದ ಮುಕ್ತರಾಗಲು ಅರ್ಚಕರ ಭೇಟಿಗೆ ದೇವಾಲಯಕ್ಕೆ ಆಗಮಿಸಿದ  ಸಂದರ್ಭ ಈ ಘಟನೆ ನಡೆದಿದೆ ಎಂದು ಮಹಿಳೆ ಆರೋಪಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪಿಯನ್ನು ಸುರೇಂದ್ರ ಸಿಂಗ್ (೫೫) ಎಂದು ಗುರುತಿಸಲಾಗಿದೆ. ಮಹಿಳೆ ತನ್ನ ೭೦ ವರ್ಷದ ಪತಿಯೊಂದಿಗೆ ರವಿವಾರ ದೇವಾಲಯಕ್ಕೆ ಭೇಟಿ ನೀಡಿದ ಸಂದರ್ಭ ಅರ್ಚಕ ಅತ್ಯಾಚಾರ ಎಸಗಿದ್ದಾನೆ. ಮಹಿಳೆ ದೇವಾಲಯದ ಸಮೀಪದ ಕೊಳಗೇರಿಯಲ್ಲಿ ವಾಸಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಪ್ರಕರಣ ಸಂಬಂಧಿಸಿ ಮಹಿಳೆ  ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಸುರೇಂದ್ರ ಸಿಂಗ್ ನನ್ನು ರವಿವಾರ ಸಂಜೆ ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿತು ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News