ರಜನಿಕಾಂತ್ ಪತ್ನಿಯನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್

Update: 2018-07-03 14:55 GMT

ಹೊಸದಿಲ್ಲಿ, ಜು. ೩: ನ್ಯಾಯಾಲಯಕ್ಕೆ ನೀಡಿದ ಭರವಸೆಯನ್ನು ಈಡೇರಿಸುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ರಜನಿಕಾಂತ್ ಅವರ ಪತ್ನಿ  ಲತಾ ರಜನಿಕಾಂತ್ ಅವರನ್ನು ಸುಪ್ರೀಂ ಕೋರ್ಟ್ ಮಂಗಳವಾರ ತರಾಟೆಗೆ ತೆಗೆದುಕೊಂಡಿದೆ.

ತನ್ನ ಹಿಂದಿನ ವಕೀಲ ತಪ್ಪಾಗಿ ಶ್ಯೂರಿಟಿ ನೀಡಿದ್ದ ಹಿನ್ನೆಲೆಯಲ್ಲಿ ಜಾಹೀರಾತು ಸಂಸ್ಥೆಗೆ 6.2 ಕೋ. ರೂ. ಪಾವತಿಸುವ ಹೊಣೆಯನ್ನು  ಕಡಿಮೆ ಮಾಡುವ ಲತಾ ಅವರ ಪ್ರಯತ್ನವನ್ನು ನ್ಯಾಯಮೂರ್ತಿ ರಂಜನ್ ಗೋಗೋಯ್ ಅವರನ್ನು ಒಳಗೊಂಡ ಪೀಠ ಪ್ರಬಲವಾಗಿ ವಿರೋಧಿಸಿದೆ.

ನ್ಯಾಯಾಲಯದ ಆದೇಶದೊಂದಿಗೆ ಜನರು ಆಟವಾಡುವುದನ್ನು ನಾವು ಬಯಸುವುದಿಲ್ಲ. ನೀವು ವಿಚಾರಣೆ ಎದುರಿಸಬೇಕು ಎಂದು ನಾವು ಬಯಸುತ್ತೇವೆ. ನೀವು ಅಮಾಯಕರಾದರೆ, ನಿಮ್ಮನ್ನು ಖುಲಾಸೆಗೊಳಿಸಲಾಗುವುದು. ವಿಚಾರಣೆ ಎದುರಿಸಿ ಎಂದು ಪೀಠ ಹೇಳಿದೆ.

ಈ ಹಿಂದಿನ ಶ್ಯೂರಿಟಿ ಪ್ರಕಾರ ಎಡಿ-ಬ್ಯುರೋ ಜಾಹೀರಾತು ಪ್ರೈವೇಟ್ ಲಿಮಿಟೆಡ್‌ಗೆ  6.2 ಕೋ. ರೂ. ಪಾವತಿ ಮಾಡಬೇಕಾಗಿದೆ. ಲತಾ ಅವರ ವೈಯುಕ್ತಿಕ ಖಾತ್ರಿಯಲ್ಲಿ ಮೀಡಿಯೋನ್ ಗ್ಲೋಬಲ್ ಎಂಟರ್‌ಟೈನ್‌ಮೆಂಟ್‌ನ 2014ರ ಚಿತ್ರ ಕೊಚಡಯ್ಯನ್ ನಿರ್ಮಾಣೋತ್ತರದ ಸಂದರ್ಭ ಹಣ ನೀಡಲಾಯಿತು ಎಂದು ಸಂಸ್ಥೆ ಆರೋಪಿಸಿದೆ.

ಲತಾ ಅವರ ಸಂಸ್ಥೆ ಹಣ ಹಿಂದಿರುಗಿಸಲು ಮಾತ್ರ ವಿಫಲವಾಗಿಲ್ಲ, ಬದಲಾಗಿ ಈ ಸಾಲವನ್ನು ಈ ಹಿಂದಿನ ಕೆಲವು ಸಾಲ ಮರು ಪಾವತಿಸಲು ಬಳಸಿಕೊಂಡಿದೆ. ಆದುದರಿಂದ ಲತಾ ಅವರ ವಿರುದ್ಧ  ವಂಚನೆ ಆರೋಪದ ಅಡಿಯಲ್ಲಿ ತನಿಖೆ ಹಾಗೂ ವಿಚಾರಣೆ ನಡೆಸಬೇಕು ಎಂದು ಜಾಹೀರಾತು ಸಂಸ್ಥೆ ಕೋರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News