ಅಧ್ಯಾಪಕರು ಅಧ್ಯಯನಶೀಲರಾಗಿರಬೇಕು: ಫಾ.ಲಾರೆನ್ಸ್ ಡಿಸೋಜ
Update: 2018-07-03 20:34 IST
ಉಡುಪಿ, ಜು.3: ಅಧ್ಯಯನ ಮತ್ತು ಅಧ್ಯಾಪನ ಒಂದಕ್ಕೊಂದು ಪೂರಕ ವಾಗಿದ್ದು ಶಿಕ್ಷಕರು ಸದಾ ಅಧ್ಯಯನಶೀಲರಾಗಿ ಹೊಸ ಹೊಸ ವಿಷಯಗಳು ಮತ್ತು ಸಂಶೋಧನೆಗಳನ್ನು ಅರಿತು ತಮ್ಮ ಬೋಧನೆಯಲ್ಲಿ ಅಳವಡಿಸಿಕೊಳ್ಳ ಬೇಕು. ಆಗ ತರಗತಿಗಳು ಹೆಚ್ಚು ಆಸಕ್ತಿದಾಯಕವಾಗಿರುತ್ತವೆ ಎಂದು ಕಲ್ಯಾಣ ಪುರ ಮಿಲಾಗ್ರಿಸ್ ವಿದ್ಯಾಸಂಸ್ಥೆಗಳ ಸಂಚಾಲಕ ವೆ.ರೆ.ಪಾ.ಲಾರೆನ್ಸ್ ಡಿಸೋಜ ಹೇಳಿದ್ದಾರೆ.
ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಲಾದ ಶಿಕ್ಷಕರ ಪ್ರಶಿಕ್ಷಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸಂಪನ್ಮೂಲ ವ್ಯಕ್ತಿಯಾಗಿ ಸಂತ ಅಲೋಶಿಯಸ್ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಡೆನಿಸ್ ಫೆರ್ನಾಂಡಿಸ್ ಪ್ರಶಿಕ್ಷಣ ಕಾರ್ಯಕ್ರಮ ನಡೆಸಿಕೊಟ್ಟರು. ಕಾಲೇಜಿನ ಪ್ರಾಂಶುಪಾಲ ಡಾ.ವಿನ್ಸೆಂಟ್ ಆಳ್ವ ಸ್ವಾಗತಿಸಿದರು. ಸಂದೀಪ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ನ್ಯಾಕ್ ಸಂಯೋಜಕ ಡಾ. ಜಯರಾಂ ಶೆಟ್ಟಿಗಾರ್ ವಂದಿಸಿದರು.