×
Ad

‘ಯಾಂತ್ರಿಕೃತಗೊಂಡ ಟೆರ್ಜಾಗಿ’ ಉಪಕರಣಕ್ಕೆ ಪ್ರಥಮ ಬಹುಮಾನ

Update: 2018-07-03 20:35 IST

ಶಿರ್ವ, ಜು.3: ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದ 20ನೆ ವರ್ಷದ ಸ್ಥಾಪನಾ ದಿನದ ಅಂಗವಾಗಿ ಏರ್ಪಡಿಸಲಾದ ರಾಜ್ಯ ಮಟ್ಟದ ಯೋಜನೆಯ ಮಾದರಿ ಸ್ಪರ್ಧೆಯಲ್ಲಿ ಬಂಟಕಲ್ಲು ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು ಸಿದ್ಧಪಡಿಸಿದ ಯಾಂತ್ರಿಕೃತಗೊಂಡ ಟೆರ್ಜಾಗಿ ಉಪಕರಣ ಪ್ರಥಮ ಬಹುಮಾನ ಗೆದ್ದುಕೊಂಡಿದೆ.

ವಿಭಾಗದ ಸಹಾಯಕ ಪ್ರಾಧ್ಯಾಪಕ ಸುನಿಲ್ ಹಲ್ದಾನ್ಕರ್ ಮಾರ್ಗದರ್ಶನ ದಲ್ಲಿ ವಿದ್ಯಾರ್ಥಿಗಳಾದ ಕಿಶೋರ್, ಜೀವನ್ ಪೂಜಾರಿ, ರಕ್ಷಿತ್, ಅನ್ವಿತ ಸಿದ್ಧಪಡಿಸಿದ ಈ ಉಪಕರಣಕ್ಕೆ ಪ್ರಥಮ 25,000ರೂ. ನಗದು ಮತ್ತು ಫಲಕ ವನ್ನು ವಿಶ್ವವಿದ್ಯಾಲಯದ ಉಪಕುಲಪತಿಗಳು ಪ್ರದಾನ ಮಾಡಿದರು.

ಈ ಉಪಕರಣದಲ್ಲಿ ಮಣ್ಣಿನ ಒಣ ಸಾಂದ್ರತೆಯನ್ನು ಹತ್ತು ಸೆಕೆಂಡುಗಳಲ್ಲಿ ಕಂಡುಹಿಡಿಯಬಹುದಾಗಿದೆ. ಅದರ ಜೊತೆಗೆ ಮಣ್ಣಿನ ತಾಪಮಾನ, ಆರ್ದ್ರತೆ, ದಿನಾಂಕ, ಸಮಯ ಮತ್ತು ಸ್ಥಳದ ವಿವರಗಳನ್ನು ನೀಡುತ್ತದೆ. ಪ್ರಸ್ತುತ ಅನು ಸರಿಸುತ್ತಿರುವ ಸಾಂಪ್ರದಾಯಿಕ ವಿಧಾನದಲ್ಲಿ ಈ ಮೇಲಿನ ಅಂಶಗಳನ್ನು ಕಂಡುಹಿಡಿಯಲು ಒಂದು ದಿನ ಬೇಕಾಗುತ್ತದೆ ಮತ್ತು ದೊಡ್ಡ ಪ್ರಮಾಣದ ಉಪಕರಣದ ನೆರವು ಬೇಕಾಗುತ್ತದೆ. ಆದರೆ ಈ ಉಪಕರಣದ ಖರ್ಚು ತುಂಬಾ ಕಡಿಮೆ ಇದ್ದು, ಕಡಿಮೆ ಸಮಯದಲ್ಲಿ ಹೆಚ್ಚು ಮಣ್ಣಿನ ಮಾದರಿಯಲ್ಲಿನ ಅಂಶಗಳನ್ನು ಕಂಡುಹಿಡಿಯಲು ತುಂಬಾ ಸಹಕಾರಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News