ಎನ್‌ಎಸ್‌ಯುಐನಿಂದ ದೇಶಾದ್ಯಂತ ಅಮಿತ್ ಶಾ ವಿರುದ್ಧ ದೂರುಗಳು ದಾಖಲು!

Update: 2018-07-03 15:51 GMT

ಹೊಸದಿಲ್ಲಿ,ಉ.3: ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ‘ಕಾನೂನಿನ ಆಡಳಿತವನ್ನು ಬುಡಮೇಲುಗೊಳಿಸಲು’ ಆಡಳಿತ ಪಕ್ಷದ ಮುಖ್ಯಸ್ಥರಾಗಿ ತನ್ನ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್‌ನ ವಿದ್ಯಾರ್ಥಿ ಘಟಕ ಎನ್‌ಎಸ್‌ಯುಐ ಮಂಗಳವಾರ ಅವರ ವಿರುದ್ಧ ದೇಶಾದ್ಯಂತ ಪೊಲೀಸ್ ದೂರುಗಳನ್ನು ದಾಖಲಿಸಿದೆ.

ಎನ್‌ಎಸ್‌ಯುಐ ಕಾರ್ಯಕರ್ತರು 28 ರಾಜ್ಯಗಳ ನೂರು ಜಿಲ್ಲೆಗಳಲ್ಲಿ ದೂರುಗಳನ್ನು ದಾಖಲಿಸಿದ್ದಾರೆ ಎಂದು ಎಐಸಿಸಿ ಜಂಟಿ ಕಾರ್ಯದರ್ಶಿ ಹಾಗೂ ವಿದ್ಯಾರ್ಥಿ ಘಟಕದ ಉಸ್ತುವಾರಿ ರುಚಿ ಗುಪ್ತಾ ಅವರು ಸುದ್ದಿಗಾರರಿಗೆ ತಿಳಿಸಿದರು.

ಸ್ವತಃ ಗುಪ್ತಾ ಅವರು ಇತರ ಕಾರ್ಯಕರ್ತರೊಂದಿಗೆ ಇಲ್ಲಿಯ ಸಂಸತ್ ರಸ್ತೆ ಪೊಲೀಸ್ ಠಾಣೆಗೆ ತೆರಳಿ ಶಾ ವಿರುದ್ಧ ದೂರು ದಾಖಲಿಸಿದ್ದಾರೆ. ಶಾ ಅವರ ‘ಅಪರಾಧಿತ್ವ’ದ ವಿರುದ್ಧ ಧ್ವನಿಯೆತ್ತುವುದನ್ನ್ನು ಎನ್‌ಎಸ್‌ಯುಐ ಮುಂದುವರಿಸಲಿದೆ ಎಂದ ಗುಪ್ತಾ,ಶಾ ಆಡಳಿತ ಪಕ್ಷದ ಅಧ್ಯಕ್ಷರಾಗಿರುವುದರಿಂದ ಅವರ ವಿರುದ್ಧ ಯಾವುದೇ ಕ್ರಮವನ್ನು ತೆಗೆದುಕೊಳ್ಳಲಾಗಿಲ್ಲ ಮತ್ತು ಅವರು ಕಾನೂನಿನ ಆಡಳಿತವನ್ನು ಬಡಮೇಲುಗೊಳಿಸಲು ತನ್ನ ಅಧಿಕಾರವನ್ನು ಬಳಸಿಕೊಂಡಿದ್ದಾರೆ. ಎನ್‌ಎಸ್‌ಯುಐ ಇದನ್ನು ಸಹಿಸುವುದಿಲ್ಲ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News