×
Ad

ಅತ್ಯಾಚಾರ ಆರೋಪ: ದೂರು ದಾಖಲು

Update: 2018-07-03 22:11 IST

ಮೂಡುಬಿದಿರೆ, ಜು. 3: ಸಮೀಪದ ಪುಚ್ಚೆಮೊಗರಿನಲ್ಲಿ ಅಪ್ಪನೆ ತನ್ನ 14 ವರ್ಷದ ಮಗಳನ್ನು ಅತ್ಯಾಚಾರವೆಸಗಿದ ಆರೋಪದಲ್ಲಿ ಮೂಡುಬಿದಿರೆ ಪೊಲೀಸರು ಪೋಕ್ಸೊ ಕಾಯ್ದೆಯಡಿ ದಾಖಲಿಸಿದ್ದಾರೆ.

ಬಂಧಿತ ಆರೋಪಿಯನ್ನು ಕೇರಳ ಮೂಲದ ವಿಕ್ರಂ ಪಿಳ್ಳೆ ಎಂದು ಗುರುತಿಸಲಾಗಿದೆ. ಪುಚ್ಚೆಮೊಗರಿನ ಗಿರಣಿಯೊಂದರಲ್ಲಿ ಈತ ಕೆಲಸ ಮಾಡುತ್ತಿದ್ದ. ಜಾರ್ಖಂಡ ಮೂಲದ ತನ್ನ ಪತ್ನಿ ಹಾಗೂ ಮಗಳ ಜತೆ ಈ ಕುಟುಂಬ ಪುಚ್ಚೆಮೊಗರಿನ ಮನೆಯೊಂದರಲ್ಲಿದೆ. ಈತನ 14 ವರ್ಷದ ಮಗಳು ಇತ್ತೀಚೆಗೆ ರಾತ್ರಿ ಮನೆಯ ಹೊರಗಡೆ ಮಲಗುತ್ತಿದ್ದುದನ್ನು ಗಮನಿಸಿ ಸ್ಥಳಿಯರು ಪೊಲೀಸರಿಗೆ ಮಾಹಿತಿ ನೀಡಿದ್ದರೆನ್ನಲಾಗಿದೆ. ಪೊಲೀಸರು ಆಕೆಯನ್ನು ಪೊಲೀಸ್‌ಠಾಣೆಗೆ ಕರೆತಂದು ವಿಚಾರಿಸಿದಾಗ ಅಲ್ಲಿ ಸರಿಯಾದ ಕಾರಣ ತಿಳಿಸದಾಗ ಆಕೆಯನ್ನು ಮಂಗಳೂರಿನ ಮಕ್ಕಳ ರಕ್ಷಣೆ ಕೇಂದ್ರಕ್ಕೆ ಸ್ಥಳಾಂತರಿಸಲಾಗಿತ್ತು. ಅಲ್ಲಿ ಆಕೆಯನ್ನು ವಿಚಾರಿಸಿದಾಗ ತನ್ನ ತಂದೆಯಿಂದ ಅತ್ಯಾಚಾರಕ್ಕೊಳಗಾಗಿದ್ದೇನೆ ಎಂಬ ವಿಚಾರವನ್ನು ತಿಳಿಸಿದ್ದಾಳೆನ್ನಲಾಗಿದೆ.

ಈ ವಿಷಯವನ್ನು ಮಕ್ಕಳ ರಕ್ಷಣೆ ಕೇಂದ್ರದ ಅಧಿಕಾರಿಗಳು ಮೂಡುಬಿದಿರೆ ಪೊಲೀಸರಿಗೆ ತಿಳಿಸಿದ ನಂತರ ಪೊಲೀಸರು ವಿಚಾರಣೆ ನಡೆಸಿ ಆರೋಪಿ ವಿಕ್ರಮ ಪಿಳ್ಳೆ ವಿರುದ್ಧ ಪೊಕ್ಸೊ ಕಾಯ್ದೆ ದಾಖಲಿಸಿ ಬಂಧನಕ್ಕೆ ಕ್ರಮ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News