ಇರಾನ್ ವಿರೋಧಿ ಪ್ಯಾರಿಸ್ ರ್ಯಾಲಿಯಲ್ಲಿ ಸ್ಫೋಟ ಸಂಚು: ಇರಾನ್ ರಾಜತಾಂತ್ರಿಕ ಬಂಧನ

Update: 2018-07-03 16:54 GMT

ಲಂಡನ್, ಜು. 3: ಇರಾನ್‌ನಲ್ಲಿ ಸರಕಾರ ಬದಲಾವಣೆಗೆ ಆಗ್ರಹಿಸಿ ಪ್ರತಿಪಕ್ಷ ಕಾರ್ಯಕರ್ತರು ಪ್ಯಾರಿಸ್‌ನಲ್ಲಿ ನಡೆಸಿದ ಸಭೆಯೊಂದರಲ್ಲಿ ಬಾಂಬ್ ಸ್ಫೋಟಿಸುವ ಸಂಚು ರೂಪಿಸಿದ ಆರೋಪದಲ್ಲಿ ಇರಾನ್‌ನ ಓರ್ವ ರಾಜತಾಂತ್ರಿಕ ಹಾಗೂ ಇತರ ಇಬ್ಬರನ್ನು ಬಂಧಿಸಲಾಗಿದೆ ಎಂದು ಬೆಲ್ಜಿಯಂ ಅಧಿಕಾರಿಗಳು ಸೋಮವಾರ ಹೇಳಿದ್ದಾರೆ.

ಇದೇ ಪ್ರಕರಣಕ್ಕೆ ಸಂಬಂಧಿಸಿ ಇತರ ಮೂವರನ್ನು ಫ್ರಾನ್ಸ್‌ನಲ್ಲಿ ಬಂಧಿಸಲಾಗಿದ್ದು, ಅವರ ಪೈಕಿ ಇಬ್ಬರನ್ನು ಬಳಿಕ ಬಿಡುಗಡೆಗೊಳಿಸಲಾಗಿದೆ.

ಇರಾನ್ ರಾಜತಾಂತ್ರಿಕ ಆಸ್ಟ್ರಿಯದಲ್ಲಿರುವ ಇರಾನ್ ರಾಯಭಾರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರನ್ನು ಜರ್ಮನಿಯಲ್ಲಿ ಬಂಧಿಸಲಾಗಿದೆ.

ಇರಾನ್ ಮೂಲಕ ಬೆಲ್ಜಿಯಂ ದಂಪತಿಯೊಂದನ್ನು ಬೆಲ್ಜಿಯಂ ರಾಜಧಾನಿ ಬ್ರಸೆಲ್ಸ್‌ನಲ್ಲಿ 500 ಗ್ರಾಮ್ ರಾಸಾಯನಿಕ ಸ್ಫೋಟಕ ಟಿಎಟಿಪಿ ಮತ್ತು ಸ್ಫೋಟಿಸುವ ಸಾಧನದೊಂದಿಗೆ ಬಂಧಿಸಲಾಗಿದೆ. ಅವರೊಂದಿಗೆ ಸಂಪರ್ಕದಲ್ಲಿರುವ ಇರಾನ್ ರಾಯಭಾರಿಯನ್ನೂ ಬಳಿಕ ಬಂಧಿಸಲಾಗಿದೆ.

ಪ್ಯಾರಿಸ್‌ನ ಉಪನಗರ ವಿಲೆಪಿಂಟ್‌ನಲ್ಲಿ ಶನಿವಾರ ನ್ಯಾಶನಲ್ ಕೌನ್ಸಿಲ್ ಆಫ್ ರೆಸಿಸ್ಟೆನ್ಸ್ ಆಫ್ ಇರಾನ್ (ಎನ್‌ಸಿಆರ್‌ಐ) ಏರ್ಪಡಿಸಿದ ಸಭೆಯಲ್ಲಿ ಬಾಂಬ್ ಸ್ಫೋಟಿಸಲು ಸಂಚು ಹೂಡಿದ ಆರೋಪದಲ್ಲಿ ಇರಾನ್ ಮೂಲದ ದಂಪತಿಯನ್ನು ಬಂಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News