×
Ad

'ವೃಕ್ಷಾಂಜಲಿ'ಯಲ್ಲಿ ಮನ ಬಿಚ್ಚಿ ಮಾತನಾಡಿದ ಸಾಲು ಮರದ ತಿಮ್ಮಕ್ಕ

Update: 2018-07-03 22:47 IST

ಮಂಗಳೂರು, ಜು. 3: ‘ನನಗೀಗ ನೂರ ಏಳು ವರ್ಷ್ ...ಗುಬ್ಬಿ ಅನ್ನೋ ಸಣ್ನ ಊರ್‌ನಾಗಿ ನಾನು ಹುಟ್ಟಿದ್ದು. ಆ ಊರಿನಲ್ಲೇ ಕೂಲಿ ನಾಲಿ ಮಾಡಿ ಕಷ್ಟ ಸುಖ ಎಲ್ಲಾ ಅನುಬವ್‌ಸ್‌ದೆ..ಮಕ್ಕಳ ಭಾಗ್ಯ ಇಲ್ಲ ಅಂತಾ ಕೊರಗ್ತಾ ಇದ್ದೆ ಆಗ ನನ್ನವರು ಹೇಳಿದ್ರು ಮರನಾದ್ರೂ ಬೆಳೆಸಿ ಪುಣ್ಯಪಡೆಯೋಣ ಅಂತ. ನಾನು ಸೈ ಅಂದೆ. ನಮ್ಮ ಊರ್‌ನ ಮಣ್ಣ್ ರೋಡ್ ಪಕ್ಕ ಸಸಿ ನೆಟ್ರೆ ಮನಸ್ಯಾರಿಗಾದ್ರು ಒಳ್ಳೆದಾಗುತ್ತೈತೆ ಅಂತ ಗಿಡ ನೆಟ್ಟೆವು. ಅವರು ಪಾತಿ ಮಾಡಿದ್ರು ..ನಾನು ಗಿಡ ನೆಟ್ಟೆ. ಗಿಡಕ್ಕೆ ನೀರು ಹಾಕಲಿಕ್ಕೆ ಕುಂಬಾರರ ಮನಿಗೆ ಹೋಗಿ ಗಡಿಗೆ ತಂದಿವಿ ನಾನು ತಲಿ ಮೇಲೊಂದು..ಸೊಂಟದ ಮೇಲೊಂದು ಗಡಿ ಗೆ ತುಂಬ ನೀರು ತುಂಬಿ ಹತ್ತು ವರ್ಸ್ ಗಿಡ ಸಾಕಿದೆವು...ಗಿಡ ಬೆಳೆದು ಮರ ವಾದಾಗ ಸಂತಸ ಆಯಿತು. ಗಿಡವನ್ನೇ ನನ್ನ ಮಕ್ಕಳು ಎಂದು ತಿಳಿದೆ....ನನ್ನ ಗಂಡ ಸತ್ತು 26ವರ್ಸ್ ಆತು..ಈಗ ದತ್ತು ಮಗ ನನ್ನ ನೋಡಿಕೊಳ್ತಾ ಇದ್ದಾನೆ (ದತ್ತು ಮಗ ಉಮೇಶ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು) ..ಈ ಸಾರಿ ಮದುವೆ ಮಾಡ್ಬೇಕು ಅಂತಿದ್ದೀನಿ ನಿಮ್ಮೆಲ್ಲರ ಆಶೀರ್ವಾದ ಬೇಕು...ನನ್ನನ್ನು ಸಾಲು ಮರದ ತಿಮ್ಮಕ್ಕ ..ಒಳ್ಳೆ ಕೆಲಸ್ ಮಾಡ್ದಿ ಅಂತ ನೀವೆಲ್ಲಾ ಹರಸಿದ್ದೀರಿ..ಪರಮಾತ್ಮ...ಭಗವಂತ ...ಭೂಮ್‌ತಾಯಿ ನಿಮ್ಗೆಲ್ಲರಿಗೂ ಒಳ್ಳೇದನ್ನು ಮಾಡಲಿ...ಸಸಿ ಬೆಳೆಸಿ ಮನಸ್ಯಂಗೆ ಒಳ್ಳೆದಾಗುತ್ತೇ...ಮಳೆ ಬರುತ್ತೆ.. ಮಳೆ ಬಂದರೆ ಬೆಳೆ ಆಗುತ್ತೆ...ಎನ್ನುತ್ತಾ ತನ್ನದೇ ಆದ ಶೈಲಿಯಲ್ಲಿ ಪರಿಸರದ ಬಗ್ಗೆ ನಗರದ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಹಮ್ಮಿಕೊಂಡ ವೃಕ್ಷಾಂಜಲಿ ಕಾರ್ಯಕ್ರಮದಲ್ಲಿ ಮನಬಿಚ್ಚಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಸಂಘಟಕರ ಕೋರಿಕೆಯ ಮೆರೇಗೆ ಮನೆ ಮನೆಗೆ ಹೋಗುವುದು ಬೆಕ್ಕು.....ಅದು ಮೇಲು ಕೀಳು ಎನ್ನದೆ ಉಚ್ಚ ನೀಚ ಎನ್ನುವ ತಾರತಮ್ಯ ಹಾಡು ಹಾಡಿದರು.

ಸ್ವರೂಪ ಅಧ್ಯಯನ ಕೇಂದ್ರ ಮತ್ತು ಸಂತ ಅಲೊಶಿಯಸ್ ಕಾಲೇಜು ಮಕ್ಕಳಿಂದ ತಿಮ್ಮಕ್ಕನಿಗೆ ಪರಿಸರ ಜಾಗೃತಿ ಕಾರ್ಯಕ್ರಮ:- ಗೋಪಾಡ್ಕರ್ ನೇತೃತ್ವದ ಸ್ವರೂಪ ಅಧ್ಯಯನ ಕೇಂದ್ರದ ಮಕ್ಕಳು .ಸಾಲು ಮರದ ತಿಮ್ಮಕ್ಕನ ಮುಂದೆ ...ಎಲ್ಲಿ ಹೋದವು ಕಣ್ಣಿಗೆ ಕಾಣದಾದವು ...ಎನ್ನುವ ಹಾಡು ಹಾಡಿದರು. ಎಲ್ಲಾ ಮಾಯ ನಾಳೆ ನಾವು ಮಾಯ ... ಎನ್ನುವ ಇನ್ನೊಂದು ಗೀತೆಯ ಮೂಲಕ .....ಬುದ್ದಿ ಹೇಳುವ ದೊಡ್ಡವರೆ ನಮ್ಮನ್ನೇಕೆ ಕೊಲ್ಲುವಿರಿ ...ಬೆಳೆಯ ಬೇಡವೇ ನಿಮ್ಮ ಮಕ್ಕಳು ಶುದ್ಧ ವಾತವರಣದಲಿ ...ನಾವು ಮಕ್ಕಳು ..ಮುಂದಿನ ಪ್ರಜೆಗಳು ನಮಗೊಂದಿಷ್ಟು ಉಳಿಸಿ ಎನ್ನುವ ಮೂಲಕ ಪರಿಸರ ಸಂರಕ್ಷಣೆಯ ಸಂದೇಶವನ್ನು ಸಾರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News