ನೀರಿಗೆ ಬಿದ್ದು ಮೃತ್ಯು
Update: 2018-07-03 22:52 IST
ಕೋಟ, ಜು.3: ಬೇಳೂರು ಗ್ರಾಮದ ದೇಲಟ್ಟು ಸಮೀಪದ ಸೇತುವೆಯನ್ನು ದಾಟುವ ವೇಳೆ ಸೋಮ ಪೂಜಾರಿ (70) ಎಂಬವರು ಜು. 2ರಂದು ಅಕಸ್ಮಿಕವಾಗಿ ನೀರಿಗೆ ಬಿದ್ದು ಮೃತಪಟ್ಟಿದ್ದು, ಇವರ ಮೃತದೇಹ ಜು.3ರಂದು ಬೆಳಗ್ಗೆ ಪತ್ತೆಯಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.