×
Ad

58ನೇ ಅಂತರ್‌ರಾಜ್ಯ ಸೀನಿಯರ್ ನ್ಯಾಶನಲ್ ಅಥ್ಲೆಟಿಕ್ಸ್ ಕ್ರೀಡಾಕೂಟ: ಆಳ್ವಾಸ್‌ಗೆ 9 ಪದಕ

Update: 2018-07-03 23:03 IST

ಮೂಡುಬಿದಿರೆ, ಜು. 3: ಅಸ್ಸಾಂನ ಗುಹಾಟಿಯಲ್ಲಿ ನಡೆದ 58ನೇ ಅಂತರ್ ರಾಜ್ಯ ಸೀನಿಯರ್ ನ್ಯಾಶನಲ್ ಕ್ರೀಡಾಕೂಟದಲ್ಲಿ ಪುರುಷರ ವಿಭಾಗದ 400ಮೀ ಹಡಲ್ಸ್‌ನಲ್ಲಿ ಆಳ್ವಾಸ್ ವಿದ್ಯಾರ್ಥಿಗಳಾದ ಧಾರುಣ್ 49.68 ಸೆಕುಂಡುಗಳಲ್ಲಿ ಕ್ರಮಿಸಿ ಚಿನ್ನದ ಪದಕ, 100 ಮೀಟರ್‌ನಲ್ಲಿ ಇಲಾಕ್ಯದಾಸನ್ 10.39 ಸೆಕುಂಡುಗಳಲ್ಲಿ ಕ್ರಮಿಸಿ ಚಿನ್ನ ಮತ್ತು 200 ಮೀಟರ್‌ನಲ್ಲಿ 21.31 ಸೆಕುಂಡುಗಳಲ್ಲಿ ಕ್ರಮಿಸಿ ಬೆಳ್ಳಿ, ಮಹಿಳೆಯರ ವಿಭಾಗದ ಎತ್ತರ ಜಿಗಿತದಲ್ಲಿ ಏಂಜಲ್ ದೇವಸ್ಯ 1.78 ಮೀಟರ್ ಎತ್ತರ ಜಿಗಿದು ಚಿನ್ನದ ಪದಕ, ಅದೇ ರೀತಿ ಎತ್ತರ ಜಿಗಿತದಲ್ಲಿ ಅಭಿನಯ ಶೆಟ್ಟಿ 1.70 ಮೀಟರ್ ಎತ್ತರ ಜಿಗಿದು ಕಂಚಿನ ಪದಕದ ಸಾಧನೆ ಮಾಡಿದ್ದಾರೆ.

ಆಳ್ವಾಸ್‌ನ ಹಳೇ ವಿದ್ಯಾರ್ಥಿ ಚೇತನ್ ಪುರುಷರ ವಿಭಾಗದ ಎತ್ತರ ಜಿಗಿತದಲ್ಲಿ 2.25ಮೀಟರ್ ಎತ್ತರ ಜಿಗಿದು ಕೂಟ ದಾಖಲೆಯೊಂದಿಗೆ ಚಿನ್ನದ ಸಾಧನೆ, 400 ಮೀಟರ್ ಹಡಲ್ಸ್‌ನಲ್ಲಿ ಸಂತೋಷ್ 50.10 ಸೆಕುಂಡುಗಳಲ್ಲಿ ಕ್ರಮಿಸಿ ಬೆಳ್ಳಿಯ ಪದಕ, ಪೋಲ್ ವಾಲ್ಟ್‌ನಲ್ಲಿ ಅನೂಪ್ ಸಿ.ಪಿ 4.95 ಮೀಟರ್ ಎತ್ತರ ಜಿಗಿದು ಕಂಚಿನ ಪದಕ, ಮಹಿಳೆಯರ ವಿಭಾಗದಲ್ಲಿ ತ್ರಿವಿಧ ಜಿಗಿತದಲ್ಲಿ ಸೀನಾ 13.38 ಮೀಟರ್ ದೂರ ಜಿಗಿದು ಚಿನ್ನದ ಪದಕ, 400 ಮೀಟರ್ ಹಡಲ್ಸ್‌ನಲ್ಲಿ ಅನು ಆರ್. 57.68 ಸೆಕುಂಡುಗಳಲ್ಲಿ ಕ್ರಮಿಸಿ ಬೆಳ್ಳಿಯ ಪದಕ ಪಡೆದಿದ್ದಾರೆ.

ಕ್ರೀಡಾಪಟುಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News