ನೈಜೀರಿಯ ಫುಟ್ಬಾಲ್ ತಂಡದ ನಾಯಕನ ಅಪಹೃತ ತಂದೆಯ ಬಿಡುಗಡೆ
Update: 2018-07-03 23:11 IST
ಅಬುಜ, ಜು. 3: ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿಯಲ್ಲಿ ನೈಜೀರಿಯ ತಂಡದ ನಾಯಕನಾಗಿರುವ ಜಾನ್ ಮೈಕಲ್ ಒಬಿ ಅವರ ತಂದೆಯನ್ನು ಅಪಹರಣಕಾರರಿಂದ ಬಿಡಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದರು.
‘‘ಸೂಪರ್ ಈಗಲ್ಸ್ ಕ್ಯಾಪ್ಟನ್‌ರ ತಂದೆ ಮೈಕಲ್ ಒಬಿ ಸ್ವತಂತ್ರಗೊಂಡಿದ್ದಾರೆ’’ ಎಂದು ಆಗ್ನೇಯ ನೈರುತ್ಯದ ಎನುಗು ರಾಜ್ಯದ ಪೊಲೀಸರು ಸೋಮವಾರ ರಾತ್ರಿ ತಿಳಿಸಿದರು.
ಕಳೆದ ಗುರುವಾರ ದುಷ್ಕರ್ಮಿಗಳು ಬಂದೂಕು ತೋರಿಸಿ ಅವರನ್ನು ಅಪಹರಿಸಿದ್ದರು.
ತನ್ನ ತಂದೆಯ ಬಿಡುಗಡೆಗಾಗಿ ದೇಶದ ಫುಟ್ಬಾಲ್ ತಂಡದ ನಾಯಕ 10 ಮಿಲಿಯನ್ ನೈರ (ಸುಮಾರು 20 ಲಕ್ಷ ರೂಪಾಯಿ) ಒತ್ತೆಹಣ ನೀಡಿದ್ದಾರೆ ಎಂದು ಪೊಲೀಸರು ಹೇಳಿದರು.
ದಕ್ಷಿಣ ನೈಜೀರಿಯದಲ್ಲಿ ಗಣ್ಯ ಮತ್ತು ಶ್ರೀಮಂತ ವ್ಯಕ್ತಿಗಳನ್ನು ಹಣಕ್ಕಾಗಿ ಅಪಹರಿಸುವುದು ಸಾಮಾನ್ಯವಾಗಿದೆ.