ಜು.5: ಜಿಲ್ಲಾ ಮುಸ್ಲಿಂ ಒಕ್ಕೂಟದಿಂದ ಪ್ರತಿಭಟನೆ
Update: 2018-07-03 23:17 IST
ಮಂಗಳೂರು, ಜು.3: ಮಧ್ಯ ಪ್ರದೇಶದಲ್ಲಿ ನಡೆದಿರುವ ಬಾಲಕಿಯ ಅತ್ಯಚಾರ ಘಟನೆಯನ್ನು ದ.ಕ. ಜಿಲ್ಲಾ ಮುಸ್ಲಿಂ ಒಕ್ಕೂಟ ಖಂಡಿಸಿ, ಜು.5ರಂದು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬೆಳಗ್ಗೆ 11ಕ್ಕೆ ಸಾಂಕೇತಿಕ ಪ್ರತಿಭಟನೆ ನಡೆಯಲಿದೆ.
ಅತ್ಯಾಚಾರ ಆರೋಪಿಯನ್ನು ಕಾನೂನಿನ ಚೌಕಟ್ಟಿನ ಅಡಿಯಲ್ಲಿ ಶಿಕ್ಷಿಸಬೇಕು. ಈ ಕೃತ್ಯವು ನಾಗರಿಕ ಸಮುದಾಯವನ್ನು ತಲೆತಗ್ಗಿಸುವಂತೆ ಮಾಡಿದೆ. ಸಂತ್ರಸ್ತೆಗೆ ನ್ಯಾಯ ದೊರೆಯಬೇಕು. ಇತ್ತೀಚೆಗೆ ಅಪ್ರಾಪ್ತರ ಮೇಲಿನ ಲೈಂಗಿಕ ದೌರ್ಜನ್ಯ ಕೃತ್ಯಕ್ಕೆ ಅನುಷ್ಠಾನಿಸಿದ ಹೊಸ ಕಾನೂನು, ಈ ಅಪರಾಧಗಳಿಗೆ ಅನ್ವಯವಾದರೆ, ಮುಂದಿನ ದಿನಗಳಲ್ಲಿ ಇಂತಹ ಘೋರ ಕೃತ್ಯಗಳಿಗೆ ಕಡಿವಾಣ ಬೀಳಬಹುದು ಎಂದು ತಿಳಿಸಿದೆ.
ಕೃತ್ಯವನ್ನು ಖಂಡಿಸಿ ಸೀಮಿತ ಅವಧಿಯ ಸಾಂಕೇತಿಕ ಶಾಂತಿಯುತ ಮೌನ ಪ್ರತಿರೋಧ ಜರುಗಿಸಿ ನ್ಯಾಯ ಬೇಡಿಕೆಗಾಗಿ ರಾಷ್ಟ್ರಪತಿಗೆ ಮನವಿ ಸಲ್ಲಿಸಲಿದೆ ಎಂದು ಒಕ್ಕೂಟದ ಅಧ್ಯಕ್ಷ ಮತ್ತು ಮಾಜಿ ಮೇಯರ್ ಕೆ.ಅಶ್ರಫ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.