×
Ad

ದೇರಳಕಟ್ಟೆ: ತಾಜುಲ್ ಉಲಮಾ ನ್ಯೂ ಬೀ ಇಸ್ಲಾಮಿಕ್ ಪ್ರೀ ಸ್ಕೂಲ್ ಉದ್ಘಾಟನೆ

Update: 2018-07-04 18:15 IST

ಕೊಣಾಜೆ, ಜು. 4: ಇಸ್ಲಾಮಿನ ಆದರ್ಶ ಮಕ್ಕಳಲ್ಲಿ ಬೆಳೆಯಬೇಕು. ಮಕ್ಕಳ ಕಾರ್ಯ ಇಸ್ಲಾಂ ಚೌಕಟ್ಟು ಮೀರದೇ ನಡೆಯಬೇಕು ಎಂಬ ಉದ್ದೇಶದಿಂದ ತಾಜುಲ್ ಉಲಮಾ ನ್ಯೂ ಬೀ ಇಸ್ಲಾಮಿಕ್ ಪ್ರೀ ಸ್ಕೂಲ್‌ನ್ನು ಆರಂಭಿಸಲಾಗಿದೆ ಎಂದು ಇಸ್ಲಾಯಿಲ್ ಸಅದಿ ಉರುಮಣೆ ಹೇಳಿದರು.

ಅವರು ದೇರಳಕಟ್ಟೆಯಲ್ಲಿ ತಾಜುಲ್ ಉಲಮಾ ಮಸೀದಿಯಲ್ಲಿ ಆರಂಭಗೊಂಡ ತಾಜುಲ್ ಉಲಮಾ ನ್ಯೂ ಬೀ ಇಸ್ಲಾಮಿಕ್ ಪ್ರೀ ಸ್ಕೂಲ್‌ನ ಕಾರ್ಯಕ್ರುವನ್ನು ಉದ್ಘಾಟಿಸಿ ಮಾತನಾಡಿದರು.

ತರಗತಿಯನ್ನು ಉದ್ಘಾಟಿಸಿ ಮಾತನಾಡಿದ ಸಿಹಾಬುದ್ದೀನ್ ಸಖಾಫಿ ತಲಕ್ಕಿಯವರು ಶಿಕ್ಷಣ ಮಕ್ಕಳ ಅಭಿವೃದ್ಧಿಗಿರುವ ಸಾಧನ. ಇದರ ಬೆಳವಣಿಗೆಗೆ ಪ್ರೋತ್ಸಾಹ ನೀಡಬೇಕೆಂದು ಕರೆ ನೀಡಿದರು. ಏಷ್ಯನ್ ಬಾವಾ ಹಾಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇಸ್ಹಾಕ್ ಝುಹ್‌ರಿ, ಯಾಕೂಬ್ ಸಅದಿ, ಮನ್ಸೂರ್ ಹಿಮಾಮಿ, ಹೈದರ್ ಅಲಿ, ನಝೀರ್ ಅಹ್ಸನಿ, ಇಸ್ಮಾಯಿಲ್ ಝಕರಿಯಾ, ಅಶ್ರಫ್ ಸಅದಿ, ಹಮೀದ್ ಹಾಜಿ ದೇರಳಕಟ್ಟೆ, ಶೌಕತ್ ಹಾಜಿ, ಬಶೀರ್ ಕಲ್ಕಟ್ಟ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News