ತೆಂಕನಿಡಿಯೂರು: ಮಾದಕದ್ರವ್ಯ ವ್ಯಸನ ವಿರೋಧಿ ದಿನಾಚರಣೆ
ಉಡುಪಿ, ಜು.4: ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಹಾಗೂ ಉಡುಪಿ ನಗರದ ಮಲ್ಪೆ ಪೊಲೀಸ್ ಠಾಣೆಯ ಸಂಯುಕ್ತ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಮಾದಕ ದ್ರವ್ಯಗಳ ಮತ್ತು ಅಕ್ರಮ ಸಾಗಾಟದ ವಿರೋಧಿ ದಿನಾಚರಣೆಯನ್ನು ಕಾಲೇಜಿ ನಲ್ಲಿ ಇತ್ತೀಚೆಗೆ ಆಯೋಜಿಸಲಾಗಿತ್ತು.
ಮಲ್ಪೆ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಮಧು ಬಿ.ಇ ಮಾತನಾಡಿ, ದೈಹಿಕವಾಗಿ ಹಾಗೂ ಮಾನಸಿಕವಾಗಿ ಒಬ್ಬ ವ್ಯಕ್ತಿಯಲ್ಲಿ ಮಾದಕ ದ್ರವ್ಯಗಳ ಸೇವನೆ ಯಾವ ರೀತಿ ಹಾನಿಯನ್ನುಂಟು ಮಾಡುತ್ತವೆ ಎಂಬುದ್ನು ಉದಾಹರಣೆ ಸಹಿತ ವಿವರಿಸಿದರು.
ಯುವಜನತೆ ದೈಹಿಕ ಹಾಗೂ ಮಾನಸಿಕ ಕ್ಷಮತೆಯನ್ನು ಕಾಯ್ದುಕೊಳ್ಳಲು ಆರೋಗ್ಯಕರ ಹವ್ಯಾಸಗಳನ್ನು ಮೈಗೂಡಿಸಿಕೊಂಡರೆ ಅವರು ದೇಶಕ್ಕೆ ಒಳ್ಳೆಯ ಆಸ್ತಿಯಾಗಿ ಮೂಡಿಬರಲಿದ್ದಾರೆ ಎಂದು ವುಧು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಪೊಲೀಸ್ ನಿರೀಕ್ಷಕ ಮಂಜುನಾಥ್ ಮಾತನಾಡಿ, ಮಾದಕದ್ರವ್ಯಗಳ ಸೇವನೆಗೆ ಯುವಪೀಳಿಗೆ ಬಲಿಯಾದರೆ ಅದು ದೇಶಕ್ಕೆ ಬಹುದೊಡ್ದ ನಷ್ಟ. ಕ್ರಿಯಾಶೀಲ ಜೀವನಶೈಲಿ, ಪ್ರವೃತ್ತಿಯನ್ನು ಮೈಗೂಡಿಸಿಕೊಂಡರೆ ದುಶ್ಚಟಗಳಿಂದ ದೂರವಿರಬಹುದು ಎಂದು ವಿವರಿಸಿದರು.
ಪೊಲೀಸ್ ನಿರೀಕ್ಷಕ ಮಂಜುನಾಥ್ ಮಾತನಾಡಿ, ಮಾದಕದ್ರವ್ಯಗಳ ಸೇವನೆಗೆ ಯುವಪೀಳಿಗೆ ಬಲಿಯಾದರೆ ಅದು ದೇಶಕ್ಕೆ ಬಹುದೊಡ್ದ ನಷ್ಟ. ಕ್ರಿಯಾಶೀಲ ಜೀವನಶೈಲಿ, ಪ್ರವೃತ್ತಿಯನ್ನು ಮೈಗೂಡಿಸಿಕೊಂಡರೆ ದುಶ್ಚಟಗಳಿಂದ ದೂರವಿರಬಹುದು ಎಂದು ವಿವರಿಸಿದರು. ಇದೇ ಸಂದರ್ಭದಲ್ಲಿ ಸಂಚಾರಿ ನಿಯಮಗಳು ಹಾಗೂ ವಿವಿಧ ಕಾಯ್ದೆಗಳ ಬಗ್ಗೆಯೂ ಪೊಲೀಸ್ ಅಧಿಕಾರಿಗಳು ತಮ್ಮ ವಿಶೇಷ ಉಪನ್ಯಾಸದಲ್ಲಿ ವಿವರಿಸಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ. ಬಾಲಕೃಷ್ಣ ಎಸ್. ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಡಾ.ಜಯಪ್ರಕಾಶ್ ಶೆಟ್ಟಿ ಸ್ವಾಗತಿಸಿ, ಪ್ರೊ. ಉಮೇಶ್ ಪೈ ಕಾರ್ಯಕ್ರಮ ನಿರೂಪಿಸಿದರು.