×
Ad

ಜು.5: ಮಂಗಳೂರು ವಿವಿ ಪದವಿ ಪರೀಕ್ಷಾ ಫಲಿತಾಂಶ

Update: 2018-07-04 20:31 IST

ಮಂಗಳೂರು, ಜು.4: ಮಂಗಳೂರು ವಿಶ್ವವಿದ್ಯಾನಿಲಯದ ಎಪ್ರಿಲ್/ಮೇ 2018ರಲ್ಲಿ ನಡೆದ ಪದವಿ ಪರೀಕ್ಷೆಗಳ (ಬಿ.ಎ./ ಬಿಎಸ್ಸಿ/ ಬಿ.ಕಾಂ./ ಬಿಸಿಎ/ ಬಿಬಿಎಂ/ ಬಿಬಿಎ/ ಬಿಎಸ್ಸಿ(ಎಫ್‌ಎನ್‌ಡಿ)/ ಬಿಎಚ್‌ಎಂ/ ಬಿಎಚ್‌ಎಸ್/ ಬಿಎಸ್ಸಿ(ಎಫ್‌ಡಿ/ಐಡಿ) /ಬಿ.ಎ.ಎಸ್.ಎಲ್.ಪಿ /ಬಿಎಸ್‌ಡಬ್ಲ್ಯೂ/ ಬಿ.ಎ.(ಎಚ್‌ಆರ್‌ಡಿ) ಫಲಿತಾಂಶವು ಜು.5ರಂದು ಮಧ್ಯಾಹ್ನ 3 ಗಂಟೆಗೆ ಪ್ರಕಟಗೊಳ್ಳಲಿದೆ.

ನಂತರ ವಿಶ್ವವಿದ್ಯಾನಿಲಯದ ಅಧಿಕೃತ ವೆಬ್‌ಸೈಟ್‌ನಲ್ಲಿ (www.mangaloreuniversity.ac.in) ಪ್ರಕಟಿಸಲಾಗುವುದು. ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಇಚ್ಚಿಸುವ ವಿದ್ಯಾರ್ಥಿಗಳು ಅರ್ಜಿಯನ್ನು ಜು.14ರೊಳಗಾಗಿ ಆನ್‌ಲೈನ್ ಅಂಕಪಟ್ಟಿಯೊಂದಿಗೆ ಕಾಲೇಜು ಮುಖಾಂತರ ಸಲ್ಲಿಸಬಹುದು ಎಂದು ಪರೀಕ್ಷಾಂಗ ವಿಭಾಗದ ಕುಲಸಚಿವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News