×
Ad

ವಾಹನ, ನಗದು ಕಳವು ಪ್ರಕರಣ: ಆರೋಪಿ ಸೆರೆ

Update: 2018-07-04 20:52 IST

ಬಂಟ್ವಾಳ, ಜು. 4: ವಾಹನ-ನಗದು ಕಳವು ಆರೋಪಿಯೋರ್ವನನ್ನು ವಿಟ್ಲ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಧರ್ಮಸ್ಥಳದ ನಿಡ್ಲೆಯ ನಿವಾಸಿ ರಾಜೇಶ್ ಬಂಧಿತ ಆರೋಪಿ. ಜೂ. 11ರಂದು ಸಂಜೆ ವಿಟ್ಲದ ಉದ್ಯಮಿಯೊಬ್ಬರ ದ್ವಿಚಕ್ರ ವಾಹನ ಹಾಗೂ ಅದರೊಳಗಿದ್ದ 1.76 ಲಕ್ಷ ರೂ. ಕಳವುವಾಗಿದ್ದು, ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪಿಯನ್ನು ಬಂಟ್ವಾಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News