×
Ad

‘ಕೆಸರ್ದ ಗೊಬ್ಬುಲು: ಕೃಷಿಕರ ಬದುಕಿನ ನೈಜ ಚಿತ್ರಣ ಅನಾವರಣ’

Update: 2018-07-04 20:56 IST

 ಮಂಗಳೂರು, ಜು.4: ‘ಕೇಸರ್ದ ಗೊಬ್ಬುಲು’ ಕ್ರೀಡಾಕೂಟದ ಮೂಲಕ ಕೃಷಿಕರ ಬದುಕಿನ ನೈಜ ಚಿತ್ರಣ ಅನಾವರಣಗೊಂಡಿದೆ. ಕ್ರೀಡೆಯ ಮೂಲಕ ಪರಸ್ಪರ ಪ್ರೀತಿ, ವಿಶ್ವಾಸ ಬೆಳೆಸುವ ಕಾರ್ಯ ಯುವವಾಹಿನಿ ಕುಳೂರು ಘಟಕ ಮಾಡುತ್ತಿದೆ ಎಂದು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಯಶವಂತ ಪೂಜಾರಿ ತಿಳಿಸಿದ್ದಾರೆ.

ಯುವವಾಹಿನಿ ಕೂಳೂರು ಘಟಕದ ಆಶ್ರಯದಲ್ಲಿ ರವಿವಾರ ಕೂಳೂರಿನ ಮೇಲ್ ಕೊಪ್ಪಳದಲ್ಲಿ ಜರುಗಿದ ‘ಕೆಸರ್ದ ಗೊಬ್ಬುಲು’ 2018 ಕ್ರೀಡಾಕೂಟದ ಗದ್ದೆಗೆ ಸಾಂಪ್ರದಾಯಿಕವಾಗಿ ಹಾಲು ಹಾಗೂ ತೆಂಗಿನಕಾಯಿ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವವಾಹಿನಿ ಕೇಂದ್ರ ಸಮಿತಿಯ ಉಪಾಧ್ಯಕ್ಷ ಜಯಂತ ನಡುಬೈಲು ವಹಿಸಿದ್ದರು. ಮುಖ್ಯಅತಿಥಿಗಳಾಗಿ ಪತ್ರಕರ್ತ ಹಾಗೂ ರಂಗ ನಿರ್ದೇಶಕ ಪರಮಾನಂದ ಸಾಲ್ಯಾನ್, ಕೂಳೂರು ಘಟಕದ ಗೌರವ ಸಲಹೆಗಾರ ನೇಮಿರಾಜ್, ಕೂಳೂರು ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಬಿ.ಕೆ. ಸುಜಿತ್, ಕೂಳೂರು ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಮಂದಿರದ ಅಧ್ಯಕ್ಷ ಜಯಾನಂದ ಅಮೀನ್, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಮಂದಿರದ ಪ್ರಧಾನ ಕಾರ್ಯದರ್ಶಿ ಸದಾಶಿವ ಬಿ. ಸುವರ್ಣ, ಗಿರಿಧರ್ ಸನಿಲ್, ಬಿ.ನವೀನ್ ಚಂದ್ರ ಪೂಜಾರಿ, ಪದ್ಮನಾಭ ಮರೋಳಿ, ಯುವವಾಹಿನಿಯ ಮಾಜಿ ಅಧ್ಯಕ್ಷ ಕೆ.ವಿಶ್ವನಾಥ್, ಕಾರ್ಯದರ್ಶಿ ಪವಿತ್ರ ಅಂಚನ್ ಉಪಸ್ಥಿತರಿದ್ದರು.

ಯುವವಾಹಿನಿ ಕೂಳೂರು ಘಟಕದ ಅಧ್ಯಕ್ಷ ಲೋಕೇಶ್ ಕೋಟ್ಯಾನ್ ಸ್ವಾಗತಿಸಿದರು. ಘಟಕದ ಸ್ಥಾಪಕ ಅಧ್ಯಕ್ಷ ಸುಜಿತ್‌ರಾಜ್ ನಿರೂಪಿಸಿದರು. ಸಂಚಾಲಕ ರೋಹಿತ್ ಕೂಳೂರು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News