ದೇವಸ್ಥಾನ ನಿರ್ಮಾಣಕ್ಕೆ ಜಮೀನು, 3.5 ಲಕ್ಷ ರೂ. ದಾನ ನೀಡಿದ ಮುಸ್ಲಿಮರು

Update: 2018-07-04 16:46 GMT

ಗಯಾ, ಜು.4: ದೇವಸ್ಥಾನದ ನಿರ್ಮಾಣಕ್ಕಾಗಿ ಭೂಮಿಯನ್ನು ದಾನ ಮಾಡಿದ ಮುಸ್ಲಿಮರು ಆರ್ಥಿಕ ಸಹಾಯವನ್ನೂ ನೀಡಿದ ಸಾಮರಸ್ಯದ ಬೆಳವಣಿಗೆ ಬಿಹಾರದ ಗಯಾ ಜಿಲ್ಲೆಯಲ್ಲಿ ನಡೆದಿದೆ.

ಮನ್ಸೂದ್ ಅಹ್ಮದ್ ಎಂಬವರು ತಮ್ಮ ಜಮೀನನ್ನು ದೇವಸ್ಥಾನ ನಿರ್ಮಾಣಕ್ಕೆ ಬಿಟ್ಟು ಕೊಟ್ಟಿದ್ದರೆ, ಉಳಿದ ಮುಸ್ಲಿಮರು ಕಟ್ಟಡ ನಿರ್ಮಾಣಕ್ಕಾಗಿ 3.5 ಲಕ್ಷ ರೂ. ದಾನ ಮಾಡಿದ್ದಾರೆ.

"ನಾವು ಇಲ್ಲಿ ಒಗ್ಗಟ್ಟಾಗಿಯೇ ಜೀವಿಸುತ್ತಿದ್ದೇವೆ. ಇದು ದೇಶದ ಉದ್ದಗಲಕ್ಕೂ ಹರಡಬೇಕು. ಈ ದೇವಸ್ಥಾನದ ನಿರ್ಮಾಣಕ್ಕೆ ಇಡೀ ಊರೇ ಒಂದಾಗಿದೆ. ಇದರಿಂದ ನಮಗೆ ಅತೀವ ಸಂತೋಷವಾಗಿದೆ" ಎಂದು ಬುಧ್ ಪುರ್ ಗ್ರಾಮಸ್ಥರು ಹೇಳಿದ್ದಾರೆ.

ಬುಧ್ ಪುರ್ ನಲ್ಲಿ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಹಿಂದೆ ಈ ಪ್ರದೇಶವನ್ನು ನಕ್ಸಲ್ ಪೀಡಿತ ಪ್ರದೇಶ ಎಂದೂ ಗುರುತಿಸಲಾಗಿದೆ.  ಗ್ರಾಮದಲ್ಲಿ ಮಸೀದಿಯೊಂದಿದ್ದು, ದೇವಸ್ಥಾನವಿರಲಿಲ್ಲ. ಬಯಲು ಪ್ರದೇಶದಲ್ಲಿ ಹಿಂದೂಗಳು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುತ್ತಿರುವುದರಿಂದ ಮುಸ್ಲಿಮರು ದೇವಸ್ಥಾನ ನಿರ್ಮಾಣಕ್ಕೆ ಸಹಾಯ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News