ಶಾಲಾ-ಕಾಲೇಜುಗಳಲ್ಲಿ ಜನಾಂಗೀಯ ವೈವಿಧ್ಯತೆ ಖಾತರಿ

Update: 2018-07-04 15:45 GMT

ವಾಶಿಂಗ್ಟನ್, ಜು. ೪: ಅಮೆರಿಕದ ಶಾಲಾ-ಕಾಲೇಜುಗಳಲ್ಲಿ ವೈವಿಧ್ಯತೆಯನ್ನು ಉತ್ತೇಜಿಸುವ ಒಬಾಮ ಕಾಲದ ನೀತಿಯನ್ನು ಕಿತ್ತೊಗೆಯಲು ಡೊನಾಲ್ಡ್ ಟ್ರಂಪ್ ಆಡಳಿತ ಮುಂದಾಗಿದೆ. ಜನಾಂಗೀಯತೆಗೆ ಒತ್ತು ನೀಡದ ಪ್ರವೇಶ ನಿಯಮಗಳನ್ನು ರೂಪಿಸಿಕೊಳ್ಳುವಂತೆ ಅದು ಶೈಕ್ಷಣಿಗೆ ಸಂಸ್ಥೆಗಳನ್ನು ಒತ್ತಾಯಿಸಲಿದೆ.

ಇದರೊಂದಿಗೆ ಟ್ರಂಪ್ ಆಡಳಿತವು, ದಶಕದ ಹಿಂದೆ ಜಾರ್ಜ್ ಡಬ್ಲ್ಯು. ಬುಶ್ ಸರಕಾರ ಜಾರಿಗೆ ತಂದಿದ್ದ ಜನಾಂಗೀಯತೆಗೆ ಮಹತ್ವ ನೀಡದ ನೀತಿಗೆ ಮರಳುತ್ತಿದೆ.

ಹಾಲಿ ನೀತಿಗಳ ಅಧ್ಯಯನಕ್ಕಾಗಿ ಅಟಾರ್ನಿ ಜನರಲ್ ಜೆಫ್ ಸೆಶನ್ಸ್ ನೇಮಿಸಿದ ಸಮಿತಿಯೊಂದು ನೀಡಿದ ವರದಿಯ ಆಧಾರದಲ್ಲಿ ಬದಲಾವಣೆಗಳನ್ನು ತರಲಾಗುತ್ತಿದೆ ಎಂದು ಕಾನೂನು ಇಲಾಖೆಯ ವಕ್ತಾರರೋರ್ವರು ‘ನ್ಯೂಯಾರ್ಕ್ ಟೈಮ್ಸ್’ಗೆ ತಿಳಿಸಿದರು.

ಈ ನೀತಿಗಳು ಸಂವಿಧಾನ ಮತ್ತು ಕಾನೂನಿಗೆ ವಿರುದ್ಧವಾಗಿವೆ ಎಂಬ ನಿರ್ಧಾರಕ್ಕೆ  ಅಧ್ಯಯನ ಸಮಿತಿ ಬಂದಿದೆ ಎಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News