ಪಂಜಾಬ್‌ನಲ್ಲಿ ಬ್ರಿಟಿಶ್ ಪ್ರಜೆ ಬಂಧನ: 70 ಕ್ಕೂ ಅಧಿಕ ಬ್ರಿಟಿಶ್ ಸಂಸದರಿಂದ ತೆರೇಸಾಗೆ ಪತ್ರ

Update: 2018-07-04 15:50 GMT

ಲಂಡನ್, ಜು. ೪: ಪಂಜಾಬ್‌ನಲ್ಲಿ ೨೦೧೭ ನವೆಂಬರ್‌ನಲ್ಲಿ ಬಂಧಿಸಲ್ಪಟ್ಟಿರುವ ಬ್ರಿಟಿಶ್ ಪ್ರಜೆ ಜಗ್ತಾರ್ ಸಿಂಗ್ ಜೋಹಲ್‌ಗೆ ಚಿತ್ರಹಿಂಸೆ ನೀಡಲಾಗುತ್ತಿದೆ ಎಂದು ಆರೋಪಿಸಿ ಲೇಬರ್ ಪಕ್ಷದ ಸಂಸದೆ ಪ್ರೀತ್ ಕೌರ್ ಗಿಲ್ ಪ್ರಧಾನಿ ತೆರೇಸಾ ಮೇಗೆ ಪತ್ರವೊಂದನ್ನು ಬರೆದಿದ್ದಾರೆ. ಈ ಪತ್ರಕ್ಕೆ ವಿವಿಧ ರಾಜಕೀಯ ಪಕ್ಷಗಳ ೭೦ಕ್ಕೂ ಅಧಿಕ ಬ್ರಿಟಿಶ್ ಸಂಸದರು ಸಹಿ ಹಾಕಿದ್ದಾರೆ.

ಜೊಹಾಲ್‌ಗೆ ಹಿಂಸೆ ನೀಡಲಾಗುತ್ತಿದೆ ಎಂಬುದಾಗಿ ಬ್ರಿಟಿಶ್ ಮಾಧ್ಯಮಗಳಲ್ಲಿ ಬಂದಿರುವ ವರದಿಗಳನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಈ ವಿಷಯದಲ್ಲಿ ಬ್ರಿಟಿಶ್ ವಿದೇಶ ಕಾರ್ಯದರ್ಶಿ ಬೊರಿಸ್ ಜಾನ್ಸನ್ ತುರ್ತಾಗಿ ಸಂಸತ್ತಿನಲ್ಲಿ ಹೇಳಿಕೆ ನೀಡಬೇಕೆಂದು ಪತ್ರ ಒತ್ತಾಯಿಸಿದೆ.

ಆರ್‌ಎಸ್‌ಎಸ್ ನಾಯಕ ಜಗದೀಶ್ ಗಗ್ನೇಜರ ಹತ್ಯೆಗೆ ಸಂಬಂಧಿಸಿ ಜೊಹಾಲ್ ಸೇರಿದಂತೆ ಐವರನ್ನು ಪಂಜಾಬ್ ಪೊಲೀಸರು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News