ಮಾರ್ಪಳ್ಳಿಯಲ್ಲಿ ಕಂಡಡೊಂಜಿ ದಿನ ಕಾರ್ಯಕ್ರಮ
ಉಡುಪಿ, ಜು.4: ಕೊರಂಗ್ರಪಾಡಿ ಮಾರ್ಪಳ್ಳಿ ಮಹಾಲಿಂಗೇಶ್ವರ ಭಜನಾ ಮಂಡಳಿ ವತಿಯಿಂದ ಕಂಡಡೊಂಜಿ ದಿನ ಕಾರ್ಯಕ್ರಮ ರವಿವಾರ ಮಾರ್ಪಳ್ಳಿಯ ಕಂಬಳಮನೆ ಗದ್ದೆಯಲ್ಲಿ ನಡೆಯಿತು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಉತ್ತಮ ಕೃಷಿಕರಾದ ಸುಶೀಲ ಶೆಡ್ತಿ, ಶಾರದಾ ಶೇರಿಗಾರ್ತಿ, ಕೂಸು ಪೂಜಾರ್ತಿ, ರತ್ನಬಾಯಿ ನಾಯ್ಕ, ಮುತ್ತು ಮಾರ್ಳ್ಳಿ ಅವರನ್ನು ಸನ್ಮಾನಿಸಲಾಯಿತು.
ಮಾರ್ಪಳ್ಳಿ ಮಹಾಲಿಂಗೇಶ್ವರ ಭಜನಾ ಮಂಡಳಿ ಅಧ್ಯಕ್ಷ ಸುರೇಶ್ ದೇವಾ ಡಿಗ, ಪ್ರಗತಿ ಪರ ಕೃಷಿಕ ಮಧುಸೂದನ ಭಟ್, ಯುವ ಉದ್ಯಮಿ ಕಂಬಳಮನೆ ರಾಜೇಶ್ ಎಸ್ ಶೆಟ್ಟಿ, ಮಾರ್ಪಳ್ಳಿ ಗರೋಡಿಮನೆ ಮಹಾಬಲ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭದಲ್ಲಿ ಮಾರ್ಪಳ್ಳಿ ಮಹಾಲಿಂಗೇಶ್ವರ ಯಕ್ಷಗಾನ ಮಂಡಳಿ ಅಧ್ಯಕ್ಷ ಸದಾಶಿವ ಶೆಟ್ಟಿ, ಚೆಂಡೆ ಬಳಗದ ಅಧ್ಯಕ್ಷ ವೇದವ್ಯಾಸ ತಂತ್ರಿ, ಅನಂತಪದ್ಮನಾಭ ಬಳಗದ ಅಧ್ಯಕ್ಷ ಮಧುಸೂದನ ಭಟ್, ನಂದಗೋಕುಲ ಯುವಕ ಮಂಡಲದ ಅಧ್ಯಕ್ಷ ಹರೀಶ್ ಎಂ., ಮಹಿಳಾ ಮಂಡಲದ ಅಧ್ಯಕ್ಷೆ ಅಂಜಲಿ ಭಟ್, ಗೆಳೆಯರ ಬಳಗದ ಅಧ್ಯಕ್ಷ ಪಾಂಡುರಂಗ ನಾಯಕ್, ಮಹಿಳಾ ಮಂಡಲದ ಅಧ್ಯಕ್ಷೆ ಪ್ರಮೀಳ ಎಸ್.ಶೆಟ್ಟಿಗಾರ್ ಹಾಜರಿದ್ದರು.